ಇಂದೋರ್ ದೇವಾಲಯ ದುರಂತ: ದೇವಸ್ಥಾನ ಧ್ವಂಸಕ್ಕೆ ಖಂಡನೆ, ಮರುನಿರ್ಮಾಣ ಮಾಡುವುದಾಗಿ ಘೋಷಿಸಿದ ಸಿಎಂ ಶಿವರಾಜ್!

ರಾಮನವಮಿ ದಿನದಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 36 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ದೇವಾಲಯವನ್ನು ಕೆಡುವ ತೀರ್ಮಾನ ಮಾಡಲಾಗಿತ್ತು. ಇದನ್ನು ಪ್ರತಿಭಟನಾಕಾರರು ಇಂದು ವಿರೋಧಿಸಿದ್ದರು.
ಇಂದೋರ್ ದೇವಸ್ಥಾನ ದುರಂತ
ಇಂದೋರ್ ದೇವಸ್ಥಾನ ದುರಂತ

ಇಂದೋರ್: ರಾಮನವಮಿ ದಿನದಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 36 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ದೇವಾಲಯವನ್ನು ಕೆಡುವ ತೀರ್ಮಾನ ಮಾಡಲಾಗಿತ್ತು. ಇದನ್ನು ಪ್ರತಿಭಟನಾಕಾರರು ಇಂದು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ಸ್ಥಳದಲ್ಲಿ ಬೆಳೇಶ್ವರ ದೇವಸ್ಥಾನವನ್ನು ಪುನರ್ ಸ್ಥಾಪಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಘೋಷಿಸಿದ್ದಾರೆ. 

ರಾಮನವಿ ದಿನದಂದು ಬೆಳೇಶ್ವರ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಭಕ್ತರು ಹವನ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ದೇವಸ್ಥಾನದ ಮಣ್ಣು ಕುಸಿದು 36 ಜನರು ಸಾವನ್ನಪ್ಪಿದ್ದರು. ದೇವಾಲಯದ ನೆಲವನ್ನು ಮೆಟ್ಟಿಲುಬಾವಿಯ ಛಾವಣಿಯ ಮೇಲೆ ನಿರ್ಮಿಸಲಾಗಿತ್ತು. ಮೇಲ್ಛಾವಣಿ ಕುಸಿದು ಬಿದ್ದಿದ್ದರಿಂದ ಈ ಭಾರಿ ಅವಘಡ ಸಂಭವಿಸಿತ್ತು.

ಇಂದೋರ್‌ನಲ್ಲಿ ಬೇಳೇಶ್ವರ ದೇವಾಲಯವನ್ನು ಕೆಡವಿರುವುದನ್ನು ವಿರೋಧಿಸಿ ಪ್ರತಿಭಟನೆಯ ನಡುವೆಯೇ, ಸಿಎಂ ಶಿವರಾಜ್ ಅದೇ ಸ್ಥಳದಲ್ಲಿ ದೇವಾಲಯವನ್ನು ಮರುನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಸಿಎಂ ಶಿವರಾಜ್ ಮಾತನಾಡಿ, 'ಈ ಹಿಂದೆ ಇಂದೋರ್‌ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಅದರ ನಂತರ ನಾವು ಇಡೀ ರಾಜ್ಯದಲ್ಲಿ ಬಾವಿಗಳು ಮತ್ತು ಮೆಟ್ಟಿಲುಬಾವಿಗಳನ್ನು ಗುರುತಿಸಲು ಸೂಚನೆಗಳನ್ನು ನೀಡಿದ್ದೇವೆ. ಬಾವಿ ಮತ್ತು ಮೆಟ್ಟಿಲುಬಾವಿಗಳನ್ನು ತುಂಬಿಸುವುದು ಪರಿಹಾರವಲ್ಲ. ಅವುಗಳನ್ನು ಜೀರ್ಣೋದ್ಧಾರ ಮಾಡಿ ಜಲಮೂಲವಾಗಿ ಬಳಸಿಕೊಳ್ಳುವ ಪ್ರಯತ್ನ ನಮ್ಮದು ಎಂದಿದ್ದಾರೆ.

ಇನ್ನು ಸಿಎಂ ಶಿವರಾಜ್, ದೇವಾಲಯವು ಬಹಳ ಪುರಾತನವಾಗಿತ್ತು. ಆದುದರಿಂದ ಅದನ್ನು ಸಂಪೂರ್ಣ ಸುರಕ್ಷಿತವಾಗಿಟ್ಟುಕೊಂಡು ಮತ್ತೆ ಸೌಹಾರ್ದತೆಯೊಂದಿಗೆ ದೇವಾಲಯವನ್ನು ಸ್ಥಾಪಿಸಲಾಗುವುದು. ಇದರಿಂದ ಭಕ್ತರು ಅಲ್ಲಿ ಮತ್ತೆ ಪೂಜೆ ಸಲ್ಲಿಸಬಹುದು ಎಂದರು. ಇನ್ನು ಸಿಎಂ ಘೋಷಣೆಗೂ ಮುನ್ನವೇ ಈ ಪುರಾತನ ದೇವಾಲಯವನ್ನು ಕೆಡವಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಭಕ್ತರು ಇಂದು ಇಂದೋರ್‌ನಲ್ಲಿ ರಸ್ತೆಗಿಳಿದು ಹಳೆಯ ಸ್ಥಳದಲ್ಲಿ ಈ ಧಾರ್ಮಿಕ ಸ್ಥಳವನ್ನು ಪುನರ್ನಿರ್ಮಿಸಲು ನಿರ್ಧರಿಸಿದರು.

ಪ್ರತಿಭಟನಾಕಾರರು ಇಂದು ಜಿಲ್ಲಾ ಕೇಂದ್ರಕ್ಕೆ ತೆರಳಿ ದೇವಸ್ಥಾನವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಡಾ.ಇಳಯರಾಜ ಟಿ ಅವರಿಗೆ ಜ್ಞಾಪನಾ ಪತ್ರವನ್ನು ಹಸ್ತಾಂತರಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 'ಸಮಗ್ರ ಸಿಂಧಿ ಸಮಾಜ' ಸಂಘಟನೆಯ ಮುಖಂಡ ದೀಪಕ್ ಖತ್ರಿ ಮಾತನಾಡಿ, 'ಬೆಳೇಶ್ವರ ಮಹಾದೇವ ಜುಲೇಲಾಲ್ ದೇವಸ್ಥಾನದಲ್ಲಿ ನಡೆದ ಭೀಕರ ಘಟನೆ ಅತ್ಯಂತ ದುಃಖ ತಂದಿದೆ. ಆದರೆ ಜಿಲ್ಲಾಡಳಿತ ತಪ್ಪು ಹೆಜ್ಜೆ ಇಟ್ಟಿದ್ದು ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ದೇವಸ್ಥಾನ ಕೆಡುವುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದರು.

ಮಾರ್ಚ್ 30ರಂದು ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದ ನೆಲ ಕುಸಿದಿದ್ದು, ಇದರಲ್ಲಿ 21 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 36 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com