ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ ಗಳ ಪ್ಯಾಂಟ್ ಒದ್ದೆಯಾಗುತ್ತಿದೆ: ಯೋಗಿ ಆದಿತ್ಯನಾಥ್ 

ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ ಗಳ ಜನರಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿದ್ದವರ ಪ್ಯಾಂಟ್ ಗಳು ಈಗ ಒದ್ದೆಯಾಗುತ್ತಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ ಗಳ ಜನರಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿದ್ದವರ ಪ್ಯಾಂಟ್ ಗಳು ಈಗ ಒದ್ದೆಯಾಗುತ್ತಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
 
ಕೋರ್ಟ್ ಗಳಿಂದ ಅವರಿಗೆ ಶಿಕ್ಷೆ ತೀರ್ಪು ಪ್ರಕಟವಾಗುತ್ತಿದ್ದು, ಜನರನ್ನು ಸುಲಿಗೆ ಮಾಡುತ್ತಿದ್ದ, ಅಪಹರಣ ಮಾಡುತ್ತಿದ್ದ ವ್ಯಕ್ತಿಗಳಿಗೆ ಪ್ಯಾಂಟ್ ಒದ್ದೆಯಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಾಟ್ಲಿಂಗ್ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿರುವ ಆದಿತ್ಯನಾಥ್, ಕಾನೂನು ಸುವ್ಯವಸ್ಥೆಗೆ ಬೆಲೆ ಕೊಡದವರು ಈಗ ಅವರ ಜೀವ ಉಳಿಸಿಕೊಳ್ಳುವುದಕ್ಕೆ ಓಡುತ್ತಿರುವುದನ್ನು ಮಂದಿ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
 
2006 ರಲ್ಲಿ ಉಮೇಶ್ ಪಾಲ್ ಎಂಬ ವಕೀಲನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ/ ಎಂಎಲ್ಎ ಕೋರ್ಟ್ ಇತ್ತೀಚೆಗೆ ಗ್ಯಾಂಗ್ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ ಗೆ ಶಿಕ್ಷೆ ನೀಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಅತೀಕ್ ಅಹ್ಮದ್ ವಿರುದ್ಧ 100 ಪ್ರಕರಣಗಳು ದಾಖಲಾಗಿದ್ದು, ಆತನಿಗೆ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com