
ಪ್ರಯಾಗ್ ರಾಜ್: ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋರ್ಜರಿ ಮಾಡಿದ್ದ ಗ್ಯಾಂಗ್ ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀಣ್ ಹಾಗೂ ಆತನ ಪುತ್ರ ಅಲಿ ವಿರುದ್ಧ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ.
ಉಮೇಶ್ ಪಾಲ್ ಬಿಎಸ್ ಪಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಶನಿವಾರದಂದು ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಮೊಹಮ್ಮದ್ ಸಬೀರ್ ಮತ್ತು ರಾಕೇಶ್ ಅಲಿಯಾಸ್ ನಾಕೇಶ್ ಅಲಿಯಾಸ್ ಲಾಲಾ ಅವರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಪ್ರಯಾಗ್ ರಾಜ್ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ರಾಕೇಶ್ ನ್ನು ವಿಚಾರಣೆಗಾಗಿ ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ರಾಕೇಶ್, ಪರ್ವೀನ್ ನೀಡಿದ್ದ ಬ್ಯಾಗನ್ನು ಬಚ್ಚಿಟ್ಟಿರುವುದಾಗಿ ಹೇಳಿದ್ದ. ತರುವಾಯ, ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅಲಿ ಅವರ ಫೋಟೋ ಹೊಂದಿರುವ ಎರಡು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಆಧಾರ್ ಕಾರ್ಡ್‌ನಲ್ಲಿ ಸಿದ್ದಿಕಿಯ ಮಗ ಸಬೀರ್ ಹೆಸರು ಇತ್ತು.
Advertisement