ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹತೆ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ವಯನಾಡ್ ಭೇಟಿ

ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ವಯನಾಡ್ ಮಾಜಿ ಸಂಸದರಿಗೆ ಅದ್ಧೂರಿ ಸ್ವಾಗತ ನೀಡಲು ಯುಡಿಎಫ್ ಜಿಲ್ಲಾ ಸಮಿತಿ ನಿರ್ಧರಿಸಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕಲ್ಪೆಟ್ಟ: ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ವಯನಾಡ್ ಮಾಜಿ ಸಂಸದರಿಗೆ ಅದ್ಧೂರಿ ಸ್ವಾಗತ ನೀಡಲು ಯುಡಿಎಫ್ ಜಿಲ್ಲಾ ಸಮಿತಿ ನಿರ್ಧರಿಸಿದೆ. 

ಸ್ವಾಗತದ ಅಂಗವಾಗಿ ಕಲ್ಪೆಟ್ಟಾದಲ್ಲಿ ಯುಡಿಎಫ್‌ನ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಮತ್ತು ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸುವ ಬೃಹತ್ ಸಾರ್ವಜನಿಕ ಸಭೆ ಮತ್ತು ರೋಡ್ ಶೋ ನಡೆಯಲಿದೆ.

ಮಧ್ಯಾಹ್ನ 3.30ಕ್ಕೆ ಕಲ್ಪೆಟ್ಟದಲ್ಲಿರುವ ಸಂಸದರ ಕಚೇರಿ ಎದುರು ಸಾರ್ವಜನಿಕ ಸಭೆಯಲ್ಲಿ ರಾಹುಲ್ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್, ಎಐಸಿಸಿ ಸದಸ್ಯರು ಹಾಗೂ ಕೆಪಿಸಿಸಿ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಯನಾಡು, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳ ನೂರಾರು ಯುಡಿಎಫ್ ಕಾರ್ಯಕರ್ತರು ಹಾಗೂ ಪಾಲಕ್ಕಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಪ್ರತಿನಿಧಿಗಳು ಸಾರ್ವಜನಿಕ ಸಭೆ ಮತ್ತು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಟಿ. ಸಿದ್ದಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯುಡಿಎಫ್ ಜಿಲ್ಲಾ ಸಮಿತಿಯು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಮತ್ತು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಸಿದ್ದಿಕ್ ಹೇಳಿದರು.

ಈಮಧ್ಯೆ, ವಯನಾಡಿನ ಮತದಾರರಿಗೆ ರಾಹುಲ್ ಬರೆದ ಪತ್ರದ ಪ್ರತಿಯನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪಿಸಲು ಪ್ರಾರಂಭಿಸಿದ್ದಾರೆ. ನಾಯಕನ ಆಗಮನಕ್ಕೂ ಮುನ್ನ ಕ್ಷೇತ್ರದ ಪ್ರತಿ ಮನೆಗೂ ಪತ್ರ ತಲುಪಿಸುವ ನಿರೀಕ್ಷೆಯಲ್ಲಿದ್ದಾರೆ. ಪತ್ರದಲ್ಲಿ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ. ಪ್ರತಿ ಬಿಕ್ಕಟ್ಟನ್ನು ಒಗ್ಗಟ್ಟಿನಿಂದ ಜಯಿಸಬೇಕು ಎಂದು ಮತದಾರರಿಗೆ ಹೇಳಿದ್ದಾರೆ.

ರಾಹುಲ್ ಕೊನೆಯದಾಗಿ ಫೆಬ್ರುವರಿಯಲ್ಲಿ ವಯನಾಡ್‌ಗೆ ಭೇಟಿ ನೀಡಿದ್ದು, ಉದ್ಯಮಿ ಗೌತಮ್ ಅದಾನಿ ಜೊತೆಗಿನ ನಂಟನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com