ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ; ಎನ್ ಸಿಪಿ, ಟಿಎಂಸಿ, ಸಿಪಿಐ ಮಾನ್ಯತೆ ರದ್ದು!

ಭಾರತೀಯ ಚುನಾವಣಾ ಆಯೋಗ  ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ  ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ನೀಡಿದೆ ಮತ್ತು ಎನ್ ಸಿಪಿ, ಟಿಎಂಸಿ ಮತ್ತು ಸಿಪಿಐ ಪಕ್ಷಗಳ ರಾಷ್ಟ್ರೀಯ ಸ್ಥಾನಮಾನವನ್ನು ರದ್ದುಪಡಿಸಿದೆ.
ಎಎಪಿಯ ಸಾಂದರ್ಭಿಕ ಚಿತ್ರ
ಎಎಪಿಯ ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಚುನಾವಣಾ ಆಯೋಗ  ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ  ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ನೀಡಿದೆ ಮತ್ತು ಎನ್ ಸಿಪಿ, ಟಿಎಂಸಿ ಮತ್ತು ಸಿಪಿಐ ಪಕ್ಷಗಳ ರಾಷ್ಟ್ರೀಯ ಸ್ಥಾನಮಾನವನ್ನು ರದ್ದುಪಡಿಸಿದೆ. ಎಎಪಿಯ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ 13 ರೊಳಗೆ ಸೂಕ್ತ ಆದೇಶಗಳನ್ನು ನೀಡುವಂತೆ ಕಳೆದ ವಾರ, ಕರ್ನಾಟಕ ಹೈಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. 

2019ರ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನಂತರ ಏಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಬೇಕು ಎಂದು ವಿವರಣೆ ಕೇಳಿ, 2019 ಜುಲೈನಲ್ಲಿ ಎನ್ ಸಿಪಿ, ಟಿಎಂಸಿ ಮತ್ತು ಸಿಪಿಐ ಪಕ್ಷಗಳಿಗೆ ಆಯೋಗ ನೋಟಿಸ್ ನೀಡಿತ್ತು. ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 6ಬಿ ಅಡಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಪಕ್ಷವಾಗಿದ್ದರೆ ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಲು ಅರ್ಹವಾಗಿದೆ.

 ಲೋಕಸಭಾ ಅಥವಾ ಅಸೆಂಬ್ಲಿ ಚುನಾವಣೆಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಅದರ ಅಭ್ಯರ್ಥಿಗಳು ಶೇ. 6 ರಷ್ಟು ಮತಗಳನ್ನು ಪಡೆದರೆ, ಕಳೆದ ಚುನಾವಣೆಯಲ್ಲಿ ಆ ಪಕ್ಷದ ಕನಿಷ್ಠ ನಾಲ್ವರು ಅಭ್ಯರ್ಥಿಗಳು ಚುನಾಯಿತರಾಗಿದ್ದರೆ ಅಥವಾ ಕನಿಷ್ಠ ಮೂರು ರಾಜ್ಯಗಳಲ್ಲಿ ಒಟ್ಟಾರೇ ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ ಶೇ. 2 ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಬಹುದಾಗಿದೆ. 

ದೆಹಲಿ ಮತ್ತು ಪಂಜಾಬ್‌ನಲ್ಲಿ ದೊಡ್ಡ ಬಹುಮತ ಮತ್ತು ಅತಿ ದೊಡ್ಡ ಮತ ಹಂಚಿಕೆಗಳೊಂದಿಗೆ ಎಎಪಿ ಅಧಿಕಾರದಲ್ಲಿದೆ. ಅಲ್ಲದೇ ಮಾರ್ಚ್ ನಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶೇ. 6.77ರಷ್ಟು ಮತಗಳನ್ನು ಪಡೆದಿತ್ತು. ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಐದು ಸ್ಥಾನಗಳನ್ನು ಗೆದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com