ಮುತ್ತಿಟ್ಟು, ತನ್ನ ನಾಲಿಗೆ ಚೀಪುವಂತೆ ಹೇಳಿದ್ದ ವಿಡಿಯೋ ವೈರಲ್: ಬಾಲಕನ ಬಳಿ ಕ್ಷಮೆಯಾಚಿಸಿದ ದಲೈಲಾಮಾ

ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿದ್ದ ವಿಡಿಯೋವೊಂದು ವೈರಲ್‌ ಆದ ಬೆನ್ನಲ್ಲೇ ದಲೈಲಾಮಾ ಅವರು, ಬಾಲಕನ ಬಳಿ ಕ್ಷಮೆಯಾಚಿಸಿದ್ದಾರೆ.
ಬಾಲಕನಿಗೆ ತನ್ನ ನಾಲಿಗೆ ಚೀಪುವಂತೆ ಹೇಳುತ್ತಿರುವ ದಲೈಲಾಮಾ.
ಬಾಲಕನಿಗೆ ತನ್ನ ನಾಲಿಗೆ ಚೀಪುವಂತೆ ಹೇಳುತ್ತಿರುವ ದಲೈಲಾಮಾ.

ನವದೆಹಲಿ: ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿದ್ದ ವಿಡಿಯೋವೊಂದು ವೈರಲ್‌ ಆದ ಬೆನ್ನಲ್ಲೇ ದಲೈಲಾಮಾ ಅವರು, ಬಾಲಕನ ಬಳಿ ಕ್ಷಮೆಯಾಚಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಂದಿದ್ದ ಭಾರತೀಯ ಮಗುವಿಗೆ ಮುತ್ತಿಟ್ಟು ನಂತರ, “ನೀನು ನನ್ನ ನಾಲಿಗೆ ಚೀಪುವೆಯಾ’ ಎಂದು ದಲೈಲಾಮಾ ಕೇಳಿದ್ದರು. ಇದರ ವಿಡಿಯೋ ವೈರಲ್ ಆಗಿದ್ದು. ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.

ಈ ಸಂಬಂಧ ಬಾಲಕನಿಗೆ ದಲೈಲಾಮಾ ಅವರು ಕ್ಷಮೆಯಾಚಿಸಿದ್ದಾರೆ. ಅಧಿಕೃತ ಹೇಳಿಕೆಯಲ್ಲಿ ತನ್ನ ಮಾತುಗಳಿಂದ ಅಪ್ರಾಪ್ತ ವಯಸ್ಕ ಬಾಲಕ ಮತ್ತು ಅವನ ಕುಟುಂಬಕ್ಕೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

ದಲೈಲಾಮಾ ಅವರು ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ಭೇಟಿಯಾಗುವ ಜನರನ್ನು ಆಗಾಗ್ಗೆ ಕೀಟಲೆ ಮಾಡುತ್ತಾರೆ” ಎಂದು ದಲೈಲಾಮಾ ಅವರು ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com