'ನಾನು ಬದುಕಿರುವವರೆಗೂ ಮದ್ಯ ನಿಷೇಧಕ್ಕೆ ಅವಕಾಶ ನೀಡಲ್ಲ': ಛತ್ತೀಸ್‌ಗಢ ಅಬಕಾರಿ ಸಚಿವ

ಛತ್ತೀಸ್‌ಗಢದಲ್ಲಿ ಮದ್ಯ ನಿಷೇಧದ ಕುರಿತು ನಡೆಯುತ್ತಿರುವ ರಾಜಕೀಯದ ನಡುವೆ, ರಾಜ್ಯದ ಅಬಕಾರಿ ಸಚಿವ ಕವಾಸಿ ಲಖ್ಮಾ ಅವರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ತಾವು ಬದುಕಿರುವವರೆಗೂ ಬಸ್ತಾರ್‌ನಲ್ಲಿ ಮದ್ಯಪಾನ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬಸ್ತಾರ್ (ಛತ್ತೀಸಗಢ): ಛತ್ತೀಸ್‌ಗಢದಲ್ಲಿ ಮದ್ಯ ನಿಷೇಧದ ಕುರಿತು ನಡೆಯುತ್ತಿರುವ ರಾಜಕೀಯದ ನಡುವೆ, ರಾಜ್ಯದ ಅಬಕಾರಿ ಸಚಿವ ಕವಾಸಿ ಲಖ್ಮಾ ಅವರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ತಾವು ಬದುಕಿರುವವರೆಗೂ ಬಸ್ತಾರ್‌ನಲ್ಲಿ ಮದ್ಯಪಾನ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಸ್ತಾರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮದ್ಯಪಾನವು ಬುಡಕಟ್ಟು ಜನರ ಅಗತ್ಯ ಎಂದ ಅವರು, ಮದ್ಯ ಸೇವನೆಯನ್ನು ಬೆಂಬಲಿಸಿದರು. ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಹೇಳಿದರು.
ಆದಿವಾಸಿಗಳ ಪ್ರಾಬಲ್ಯವಿರುವ ಬಸ್ತಾರ್ ಪ್ರದೇಶದಲ್ಲಿ ಮದ್ಯಪಾನ ನಿಷೇಧದ ನಿಯಮಗಳು ಇಡೀ ರಾಜ್ಯಕ್ಕಿಂತ ಭಿನ್ನವಾಗಿರುತ್ತವೆ ಮತ್ತು ಈ ಬಗ್ಗೆ ಅಲ್ಲಿನ ಪಂಚಾಯಿತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಲಖ್ಮಾ ಈ ಹಿಂದೆ ಹೇಳಿದ್ದರು.

'ಬಸ್ತಾರ್‌ನ ಜನರು ಮತ್ತು ಅವರ ಪೂಜಾ ವಿಧಾನಗಳು ವಿಭಿನ್ನವಾಗಿವೆ. ಪೂಜೆಯ ಸಮಯದಲ್ಲಿ ಹಲವಾರು ಆಚರಣೆಗಳನ್ನು ಮದ್ಯಪಾನವಿಲ್ಲದೆ ಮಾಡಲಾಗುವುದಿಲ್ಲ. ಆದ್ದರಿಂದ, ಮದ್ಯ ನಿಷೇಧದ ಬಗ್ಗೆ ಬಸ್ತಾರ್‌ನಲ್ಲಿ ನಿಯಮಗಳು ಭಿನ್ನವಾಗಿರುತ್ತವೆ ಮತ್ತು ಅಲ್ಲಿ ಮದ್ಯವನ್ನು ನಿಷೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಪ್ರಾಬಲ್ಯವಿದ್ದು, ಅಲ್ಲಿನ ಪಂಚಾಯಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ' ಎಂದರು.

ರಾಜಕೀಯದಿಂದ ಮೇಲೇರುತ್ತಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಛತ್ತೀಸ್‌ಗಢದ ಒಳಿತಿಗಾಗಿ ಯೋಚಿಸುತ್ತಿದ್ದು, ಎಲ್ಲ ಪಕ್ಷಗಳ ಒಬ್ಬರಿಂದ ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಈ ಸಮಿತಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನತಾ ಕಾಂಗ್ರೆಸ್ ಛತ್ತೀಸ್‌ಗಢ ತಮ್ಮ ಪಕ್ಷಗಳ ಹೆಸರನ್ನು ಪ್ರಸ್ತಾಪಿಸಲಿಲ್ಲ. ಬಹುಜನ ಸಮಾಜ ಪಕ್ಷವು ಸಮಿತಿಯ ಸದಸ್ಯರ ಹೆಸರನ್ನು ಪ್ರಸ್ತಾಪಿಸಿದೆ ಆದರೆ ಅವರು ಸಭೆಗೆ ಬಂದಿಲ್ಲ ಎಂದು ಲಖ್ಮಾ ಆರೋಪಿಸಿದ್ದಾರೆ.

ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಇಲ್ಲಿನ ಜನರ ಹಿತದೃಷ್ಟಿಯಿಂದ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಲಖ್ಮಾ ಹೇಳಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ರಂಜನಾ ಸಾಹು, ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದೆಡೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿರುವ ಸಮಿತಿಯು ದೇಶದ ಹಲವು ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದರೆ, ಮತ್ತೊಂದೆಡೆ ಮದ್ಯ ಮಾರಾಟದಲ್ಲಿ ರಾಜ್ಯ ದಾಖಲೆ ಮಾಡಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com