ಪ್ರಾಣ ಕೊಡಲು ಸಿದ್ಧ ಆದರೆ... ಬಿಜೆಪಿ ವಿರುದ್ಧ ಮಮತಾ ಕೆಂಡ!

ಬಿಜೆಪಿಯವರು ದ್ವೇಷದ ರಾಜಕೀಯ ಮೂಲಕ  ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶನಿವಾರ ಆರೋಪಿಸಿದ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಧರ್ಮದ ಹೆಸರಿನಲ್ಲಿ ದೇಶ ವಿಭಜನೆಗೆ ಬಿಡುವುದಿಲ್ಲ ಅದಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Updated on

ಕೊಲ್ಕತ್ತಾ: ಬಿಜೆಪಿಯವರು ದ್ವೇಷದ ರಾಜಕೀಯ ಮೂಲಕ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶನಿವಾರ ಆರೋಪಿಸಿದ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಧರ್ಮದ ಹೆಸರಿನಲ್ಲಿ ದೇಶ ವಿಭಜನೆಗೆ ಬಿಡುವುದಿಲ್ಲ ಅದಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದಿದ್ದಾರೆ.

ಈದ್- ಉಲ್- ಫಿತ್ತರ್ ಅಂಗವಾಗಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಂಗಾಳದಲ್ಲಿ ಶಾಂತಿ ಬೇಕು, ಗಲಭೆಗಳು ಬೇಡ, ದೇಶ ವಿಭಜನೆ ಬೇಕಾಗಿಲ್ಲ ಎಂದರು. ದೇಶದಲ್ಲಿ ಒಡಕು ಸೃಷ್ಟಿಸಲು ಬಯಸುವರಿಗೆ  ಈದ್‌ನಲ್ಲಿ ಭರವಸೆ ನೀಡುತ್ತೇನೆ.  ನನ್ನ ಪ್ರಾಣವನ್ನು ನೀಡಲು ಸಿದ್ಧನಿದ್ದೇನೆ ಆದರೆ ದೇಶವನ್ನು ವಿಭಜಿಸಲು ಬಿಡಲ್ಲ. ನಮಗೆ ದಂಗೆ ಬೇಡ,  ಘರ್ಷಣೆ ಬೇಡ, ಶಾಂತಿ ಬೇಕು ಎಂದು ಅವರು ಹೇಳಿದರು. 

ಪ್ರಜಾಪ್ರಭುತ್ವ ಹೋದರೆ, ಎಲ್ಲವೂ ಹೋಗುತ್ತದೆ. ಇಂದು ಸಂವಿಧಾನ, ಇತಿಹಾಸವನ್ನು ಬದಲಾಯಿಸಲಾಗುತ್ತಿದೆ. ಬಿಜೆಪಿಯವರು ಎನ್ ಆರ್ ಸಿ ಜಾರಿಗೆ ತಂದರು, ಆದರೆ, ನಾನು ಅವರಿಗೆ ಹಾಗೆ ಮಾಡಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಗುಡುಗಿದರು. 

2002ರ ಗೋಧ್ರಾ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳ ಬಿಡುಗಡೆಯನ್ನು ಖಂಡಿಸಿದ ಮಮತಾ ಬ್ಯಾನರ್ಜಿ, ಬಿಲ್ಕಿಸ್ ಪ್ರಕರಣದಲ್ಲಿ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಆದರೆ  ಇದನ್ನು ನಾವು ಸಹಿಸುವುದಿಲ್ಲ, ಹೋರಾಟ ಮಾಡಿ ಗೆಲ್ಲುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com