ಸಿಎಂ ಸ್ಥಾನದಿಂದ ಕೆಳಗಿಳಿಸದಿದ್ದರೆ ರಾಜಕೀಯ ನಿವೃತ್ತಿ: ಮಮತಾ ಬ್ಯಾನರ್ಜಿಗೆ ಸುವೇಂದು ಅಧಿಕಾರಿ ಸವಾಲು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ, ನಿಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಗುರುವಾರ ಸವಾಲು ಹಾಕಿದ್ದಾರೆ.
ಮಮತಾ-ಸುವೇಂದು
ಮಮತಾ-ಸುವೇಂದು

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ, ನಿಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಗುರುವಾರ ಸವಾಲು ಹಾಕಿದ್ದಾರೆ.

ಇಂದು ಪ್ರತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುವೇಂದು ಅಧಿಕಾರಿ, ನೀವು ನನ್ನನ್ನು ದರೋಡೆಕೋರ ಎಂದು ಕರೆದಿದ್ದೀರಿ. ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದೀರಿ. ಆದರೆ ಸಿಎಂ ಸ್ಥಾನದಿಂದ ನೀವು ಕೆಳಗಿಳಿಯುವುದಕ್ಕೆ ದಿನಗಣೆ ಆರಂಭವಾಗಿದೆ. ಶೀಘ್ರದಲ್ಲೇ ನಿಮ್ಮ ಮಾಜಿ ಸಿಎಂ ಮಾಡದಿದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಮಮತಾ ಬ್ಯಾನರ್ಜಿ "ಭ್ರಷ್ಟಾಚಾರದ ರಾಣಿ ಜೇನುನೊಣ" ಎಂದು ಆರೋಪಿಸಿದ ಅಧಿಕಾರಿ, ಸಿಎಂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ "ಅಪರಾಧಿಗಳನ್ನು" ಬೆಂಬಲಿಸುತ್ತಿದ್ದಾರೆ, ಮೂರು ಬಾರಿ ಬಂಗಾಳದ ಸಿಎಂ ಆಗಿರುವ ದೀದಿಯ ಅಕ್ರಮಗಳನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಗುಡುಗಿದ್ದಾರೆ.

ಪ್ರಧಾನಿಯವರಿಗೆ ಸಂಬಂಧಿಸಿದಂತೆ ನೀವು ಈ ಹಿಂದೆ ಬಳಸಿದ ರೀತಿಯ ಕೀಳು ಪದಗಳನ್ನು ನನ್ನ ವಿರುದ್ಧವೂ ಬಳಸಿರುವುದು ನಾಚಿಕೆಗೇಡಿನ ಸಂಗತಿ. ನೀವು ದೆಹಲಿಗೆ ಕರೆ ಮಾಡಲು ಸ್ಥಿರ ದೂರವಾಣಿ ಬಳಸಿದ್ದೀರಿ. ಸರಿಯಾದ ಸಮಯದಲ್ಲಿ ದಾಖಲೆ ಸಮೇತ ಮಾಹಿತಿ‌ ಬಹಿರಂಗ ಪಡಿಸುವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com