ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ನಟ ಸೂರಜ್ ಪಾಂಚೋಲಿ'ಗೆ ಬಿಗ್ ರಿಲೀಫ್​, ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು

ಮಾಡೆಲ್‌, ನಟಿ ಜಿಯಾ ಖಾನ್‌ ಅವರ ಆತ್ಮಹ‌ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಶುಕ್ರವಾರ ಹೊರಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ; ಮಾಡೆಲ್‌, ನಟಿ ಜಿಯಾ ಖಾನ್‌ ಅವರ ಆತ್ಮಹ‌ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಶುಕ್ರವಾರ ಹೊರಬಿದ್ದಿದೆ.

ಘಟನೆ ನಡೆದು 10 ವರ್ಷಗಳ ನಂತರ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ‘ಜಿಯಾ ಖಾನ್​ ಆತ್ಮಹತ್ಯೆಗೆ ಆಕೆಯ ಪ್ರಿಯಕರನಾಗಿದ್ದ ಸೂರಜ್ ಪಾಂಚೋಲಿ ಕಾರಣನಲ್ಲ. ಆತ ನಿರಪರಾಧಿ‘ ಎಂದು ನ್ಯಾಯಾಲಯದ ತೀರ್ಪು ನೀಡಿದೆ. ಈ ಮೂಲಕ ಸೂರಜ್​ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಸೂರಜ್‌ ಅವರು ನಟ ಆದಿತ್ಯ ಪಂಚೋಲಿ ಹಾಗೂ ಝಾರಿನಾ ವಾಹಬ್‌ ದಂಪತಿಯ ಪುತ್ರ. ಜಿಯಾ ಖಾನ್‌ (25) ಅವರು ತಮ್ಮ ಮನೆಯಲ್ಲಿಯೇ 2013ರ ಜೂನ್ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಜಿಯಾ ಖಾನ್‌ ಅವರು ಸೂರಜ್‌ರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆತ್ಮಹತ್ಯೆಗೂ ಮುನ್ನ ಜಿಯಾ ಅವರು ಬರೆದಿದ್ದ ಪತ್ರ ಪೊಲೀಸರಿಗೆ ದೊರೆತಿತ್ತು. ಈ ಪತ್ರದಲ್ಲಿ ಸೂರಜ್‌ ಅವರೊಂದಿಗೆ ಜಿಯಾ ಅವರು ಹೊಂದಿದ್ದ ಸಂಬಂಧ, ಸೂರಜ್‌ ಆಕೆಗೆ ನೀಡಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆಯ ಕುರಿತು ಬರೆದುಕೊಂಡಿದ್ದರು.

ಜಿಯಾ ಖಾನ್‌ ಅವರ ತಾಯಿ ರಬಿಯಾ ಖಾನ್‌ ಅವರ ನಿರಂತರ ಮನವಿ ಹಾಗೂ ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್‌ 2014ರ ಜುಲೈ 3ರಂದು ನೀಡಿದ್ದ ನಿರ್ದೇಶನದಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಏಪ್ರಿಲ್​ 20ರಂದು ಅಂತಿಮ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com