ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: 10 ವರ್ಷ ಸುದೀರ್ಘ ವಿಚಾರಣೆ, ಪ್ರಮುಖ ಘಟಾನಾವಳಿಗಳು!

ಮಾಡಲ್, ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಪ್ರಿಯಕರನಾಗಿದ್ದ ಸೂರಜ್ ಪಾಂಚೋಲಿ ಅವರನ್ನು  ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಜಿಯಾ ಖಾನ್
ಜಿಯಾ ಖಾನ್

ಮುಂಬೈ: ಮಾಡಲ್, ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಪ್ರಿಯಕರನಾಗಿದ್ದ ಸೂರಜ್ ಪಾಂಚೋಲಿ ಅವರನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸಿದೆ. ಸೂರಜ್ ಪಾಂಚೋಲಿ ಜಿಯಾಖಾನ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದರು. 10 ವರ್ಷಗಳ ಸುದೀರ್ಘ ವಿಚಾರಣೆ ನಂತರ ಸೂರಜ್ ಪಾಂಚೋಲಿ ನಿರಾಪರಾಧಿ ಎಂದು ಪರಿಣಿಸಿದೆ. ಈ ಪ್ರಕರಣದ ಪ್ರಮುಖ ಘಟನಾವಳಿಗಳು ಇಲ್ಲಿವೆ.

ಜೂನ್ 3, 2013 - ಜಿಯಾ ಖಾನ್  ಜುಹುದಲ್ಲಿನ ತಮ್ಮ ನಿವಾಸದ ಬೆಡ್ ರೂಂನಲ್ಲಿ ಆತಹತ್ಯೆ ಮಾಡಿಕೊಂಡಿದ್ದರು. 
ಜೂನ್ 10, 2013: ಸೂರಜ್ ಪಾಂಚೋಲಿ ಜೊತೆಗಿನ ಸಂಬಂಧ ಕುರಿತು ಜಿಯಾ ಖಾನ್ ಬರೆದಿದ್ದ ಆರು ಪುಟಗಳ ಪತ್ರದ ಆಧಾರದ ಮೇಲೆ ನಟನನ್ನು ಪೊಲೀಸರು ಬಂಧಿಸಿದ್ದರು.
ಜುಲೈ 1, 2013 - ಸೂರಜ್ ಪಾಂಚೋಲಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.
ಜುಲೈ 2, 2013 - ಸೂರಜ್ ಪಾಂಚೋಲಿ ಜೈಲಿನಿಂದ ಹೊರಗೆ ಬಂದಿದ್ದರು. 
ಜುಲೈ 3, 2014 - ಪೊಲೀಸರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿ ಜಿಯಾ ಅವರ ತಾಯಿ ರಬಿಯಾ ಖಾನ್ ಸಲ್ಲಿಸಿದ ಮನವಿಯ ಮೇರೆಗೆ ಬಾಂಬೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು.
ಡಿಸೆಂಬರ್ 9, 2015: ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ, ಇದೊಂದು ಆತ್ಮಹತ್ಯೆಯೇ ಹೊರತು ಕೊಲೆಯಲ್ಲ ಎಂದು ಹೇಳಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸೂರಜ್ ಪಾಂಚೋಲಿ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. 
ಫೆಬ್ರವರಿ 2016 -  ಸಿಬಿಐ ಚಾರ್ಜ್‌ಶೀಟ್ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ರಬಿಯಾ ಖಾನ್ , ತನ್ನ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ಪುನರುಚ್ಚರಿಸಿದ್ದರು. ಜಿಯಾ ಯುಎಸ್ ಪ್ರಜೆಯಾಗಿರುವುದರಿಂದ ಪ್ರಕರಣದ ತನಿಖೆಗಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬೇಕೆಂದು ಅವರು ಮನವಿ ಮಾಡಿದರು. 
ಫೆಬ್ರವರಿ 25, 2016 - ರಬಿಯಾ ಖಾನ್ ಅರ್ಜಿಯ ವಿಚಾರಣೆಗೆ ಹೈಕೋರ್ಟ್ ತಡೆ
ಡಿಸೆಂಬರ್ 2016 - ಮುಕ್ತ, ನ್ಯಾಯೋಚಿತ ಮತ್ತು ತ್ವರಿತ ವಿಚಾರಣೆ ಎದುರಿಸಲು ಎಲ್ಲ ಹಕ್ಕಿದೆ ಎಂದು ಸೂರಜ್ ಪಾಂಚೋಲಿ ಹೇಳುವ ಮೂಲಕ ವಿಚಾರಣೆಯ ಮೇಲಿನ ತಡೆ ತೆರವು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ.
ಫೆಬ್ರವರಿ 1, 2017 - ರಬಿಯಾ ಖಾನ್ ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಫೆಬ್ರವರಿ 9, 2017 - ರಬಿಯಾ ಖಾನ್ ಅರ್ಜಿ  ವಜಾಗೊಳಿಸಿದ ಹೈಕೋರ್ಟ್ ಮತ್ತು ಸೂರಜ್ ಪಾಂಚೋಲಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ.
ಜನವರಿ 30, 2018 - ಸೂರಜ್ ಪಾಂಚೋಲಿ ವಿರುದ್ಧ ಆರೋಪ ರೂಪಿಸಿದ ವಿಶೇಷ ನ್ಯಾಯಾಲಯ.
ಫೆಬ್ರವರಿ 14, 2019 - ಪ್ರಕರಣದ ವಿಚಾರಣೆ ಆರಂಭ.
ಆಗಸ್ಟ್ 2022 - ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಬೀತುಪಡಿಸಲು ಸಿಬಿಐ ಯಾವುದೇ ಸಾಕ್ಷ್ಯವನ್ನು ಸಲ್ಲಿಸಿಲ್ಲ ಎಂದು ರಬಿಯಾ ಖಾನ್ ಪುನರುಚ್ಚರ. ಪ್ರಕರಣದ ಹೊಸ ತನಿಖೆ ಕೋರಿ ಹೈಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ.
ಸೆಪ್ಟೆಂಬರ್ 12, 2022 - ಸಿಬಿಐ ನ್ಯಾಯಯುತವಾಗಿ ವಿಚಾರಮೆ ನಡೆಸಿದೆ ಎಂದು ಹೇಳಿ ರಬಿಯಾ ಖಾನ್  ಅರ್ಜಿ ವಜಾಗೊಳಿಸಿದ ಹೈಕೋರ್ಟ್. 
ಏಪ್ರಿಲ್ 20, 2023 - ವಿಚಾರಣೆ ಮುಕ್ತಾಯ,  ತೀರ್ಪನ್ನು ಕಾಯ್ದಿರಿಸಿದ ವಿಶೇಷ ಸಿಬಿಐ ನ್ಯಾಯಾಲಯ.
ಏಪ್ರಿಲ್ 28, 2023 -  ಪ್ರಕರಣದಲ್ಲಿ ಸೂರಜ್ ಪಾಂಚೋಲಿಯನ್ನು ಖುಲಾಸೆಗೊಳಿಸಿದ ವಿಶೇಷ ಸಿಬಿಐ ನ್ಯಾಯಾಲಯ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com