ನವದೆಹಲಿ: ಬಿಜೆಪಿ ಹಿರಿಯ ನಾಯಕಿ, ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರ ಒಳಗೊಂಡಂತೆ ಹಲವು ಯುವಕರನ್ನು ಹೊಂದಿರುವ ದೆಹಲಿ ಭಾರತೀಯ ಜನತಾ ಪಕ್ಷದ ಹೊಸ ಪದಾಧಿಕಾರಿಗಳ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.
ಹರ್ಷ್ ಮಲ್ಹೋತ್ರಾ, ಯೋಗೇಂದ್ರ ಚಂದೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ಅವರು ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.
ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಘೋಷಿಸಿರುವ ನೂತನ ತಂಡದಲ್ಲಿ ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಮಹಿಳಾ ಪದಾಧಿಕಾರಿಗಳೂ ಇದ್ದಾರೆ.
ಎಂಟು ಕಾರ್ಯದರ್ಶಿಗಳಲ್ಲಿ ಬಾನ್ಸುರಿ ಸ್ವರಾಜ್, ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರ ಹರೀಶ್ ಖುರಾನಾ ಮತ್ತು ಇಂಪ್ರಿತ್ ಸಿಂಗ್ ಬಕ್ಷಿ ಅವರು ಸೇರಿದ್ದಾರೆ.
ಹೊಸದಾಗಿ ನೇಮಕಗೊಂಡ ಎಂಟು ಉಪಾಧ್ಯಕ್ಷರಲ್ಲಿ ವಿಷ್ಣು ಮಿತ್ತಲ್, ದಿನೇಶ್ ಪ್ರತಾಪ್ ಸಿಂಗ್, ಮಾಜಿ ಮೇಯರ್ ಲತಾ ಗುಪ್ತಾ ಮತ್ತು ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಸಿಂಗ್ ಇದ್ದಾರೆ.
ಲಕ್ಷ್ಮಿನಗರ ಶಾಸಕ ಅಭಯ್ ವರ್ಮಾ ಅವರು ದೆಹಲಿ ಬಿಜೆಪಿಯ ಮುಖ್ಯ ವಕ್ತಾರ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ.
Advertisement