ವಿರೋಧ ಪಕ್ಷಗಳ 'INDIA' ಒಕ್ಕೂಟಕ್ಕೆ ಹೊಸ ನಾಮಕರಣ ಮಾಡಿದ ಪ್ರಧಾನಿ ಮೋದಿ: ಹೆಸರು ಏನು ಗೊತ್ತೇ?

ಇತ್ತೀಚೆಗೆ ವಿಪಕ್ಷಗಳ ಮೈತ್ರಿಕೂಟ ತಮ್ಮನ್ನು ಇಂಡಿಯಾ ಎಂದು ಕರೆದುಕೊಳ್ಳುವುದರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಮಿತ್ರಪಕ್ಷಗಳನ್ನುಗುರುವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ಮೈತ್ರಿಯನ್ನು ನಿಭಾಯಿಸಲು ಹೊಸ ತಂತ್ರದ ಕುರಿತು ಸಲಹೆ ನೀಡಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಇತ್ತೀಚೆಗೆ ವಿಪಕ್ಷಗಳ ಮೈತ್ರಿಕೂಟ ತಮ್ಮನ್ನು ಇಂಡಿಯಾ ಎಂದು ಕರೆದುಕೊಳ್ಳುವುದರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎಂದು ಕರೆಯಬೇಡಿ ಬದಲಾಗಿ ‘ಘಮಂಡಿಯಾ’ ಎಂದು ಕರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಛಾಟಿ ಬೀಸಿದ್ದಾರೆ.

ಬಿಹಾರದ ಮಿತ್ರಪಕ್ಷಗಳನ್ನುಗುರುವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ಮೈತ್ರಿಯನ್ನು ನಿಭಾಯಿಸಲು ಹೊಸ ತಂತ್ರದ ಕುರಿತು ಸಲಹೆ ನೀಡಿದ್ದಾರೆ. ವಿಪಕ್ಷ ಸದಸ್ಯರನ್ನು ಇಂಡಿಯಾ(I.N.D.I.A) ಎಂದು ಕರೆಯದೆ "ಘಮಾಂಡಿಯಾ" ಎಂದು ಕರೆಯಬೇಕು ಎಂದು ಹೇಳಿದ್ದಾರೆ. ಹಿಂದಿ ಭಾಷೆಯ ಘಮಾಂಡಿಯಾ ಎಂದರೆ ಸೊಕ್ಕು- ಅಹಂಕಾರ ಎಂದರ್ಥ.

 ಇತ್ತೀಚಿನ ದಿನಗಳಲ್ಲಿ ವಿಪಕ್ಷಗಳು ತಮ್ಮ ಒಕ್ಕೂಟವನ್ನು ಇಂಡಿಯಾ ಎಂದು ಕರೆದುಕೊಳ್ಳುತ್ತಿರುವುದಕ್ಕೆ ಪದೇ ಪದೇ ಪ್ರಧಾನಿ ಮೋದಿ ಕಿಡಿಕಾರುತ್ತಲೇ ಇದ್ದಾರೆ. ಇಂಡಿಯಾ ಎಂದು ಕರೆದುಕೊಳ್ಳುವುದು ದೇಶಪ್ರೇಮದಿಂದಲ್ಲ ದೇಶವನ್ನು ದೋಚುವ ಉದ್ದೇಶದಿಂದ ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಸರ್ಕಾರದ ಯೋಜನೆಗಳನ್ನು ಎನ್‌ಡಿಎ ಸರ್ಕಾರದ ಯೋಜನೆಗಳು ಎಂದು ವಿವರಿಸಲು ಸಂಸದರಿಗೆ ಪ್ರಧಾನಿ ಸಲಹೆ ನೀಡಿದರು ಮತ್ತು ಎನ್‌ಡಿಎ ಮಾತ್ರ ಸ್ಥಿರ ಸರ್ಕಾರವನ್ನು ನೀಡುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಸೂಚಿಸಿದ್ದಾರೆ.

'ಇಂಡಿಯಾ' ಹೆಸರನ್ನು ಪದೇ ಪದೇ ಗುರಿಪಡಿಸಿದ ಪ್ರಧಾನಿ, ಈಸ್ಟ್ ಇಂಡಿಯಾ ಕಂಪನಿ ಮತ್ತು ಭಯೋತ್ಪಾದಕ ಸಂಘಟನೆಗಳ ಅವರ ಹೆಸರಿನಲ್ಲೂ "ಇಂಡಿಯಾ" ಇದೆ ಎಂದು ಹೇಳಿ ವ್ಯಂಗ್ಯವಾಡಿದ್ದರು.

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, 26 ವಿರೋಧ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಇಂಡಿಯಾ INDIA ಅಥವಾ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ ಎಂಬ ಹೊಸ ಹೆಸರಿನಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸಲು ನಿರ್ಧರಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com