ರಾಹುಲ್‌ ಗಾಂಧಿಯವರ ಮೊಹಬತ್ ಕಿ ದುಕಾನ್‌ನಲ್ಲಿ ಚೀನಾದ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ: ಅನುರಾಗ್ ಠಾಕೂರ್

ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಕಾಂಗ್ರೆಸ್ ಭಾರತ ವಿರೋಧಿ ಹಿನ್ನೆಲೆಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸೋಮವಾರ ಆರೋಪಿಸಿದ್ದಾರೆ. ಚೀನಾದ ಕಂಪನಿಗಳು ಪೋರ್ಟಲ್‌ಗೆ ಹಣ ನೀಡುತ್ತಿವೆ ಎಂದು ಆರೋಪಿಸಿದ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ನವದೆಹಲಿ: ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಕಾಂಗ್ರೆಸ್ ಭಾರತ ವಿರೋಧಿ ಹಿನ್ನೆಲೆಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸೋಮವಾರ ಆರೋಪಿಸಿದ್ದಾರೆ. ಚೀನಾದ ಕಂಪನಿಗಳು ಪೋರ್ಟಲ್‌ಗೆ ಹಣ ನೀಡುತ್ತಿವೆ ಎಂದು ಆರೋಪಿಸಿದ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಜಂಠಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕೂರ್, 'ರಾಹುಲ್ ಜಿ ಅವರ ನಕಲಿ 'ಮೊಹಬ್ಬತ್ ಕಿ ದುಕಾನ್'ನಲ್ಲಿ ಚೀನಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ' ಎಂದು ಆರೋಪಿಸಿದರು.

'NewsClick ವೆಬ್‌ಸೈಟಿನ ಫಂಡಿಂಗ್ ನೆಟ್‌ವರ್ಕ್ ಅನ್ನು ನೋಡಿದರೆ, ಇದು ವಿದೇಶಿ ಪ್ರಜೆಯಾದ ನೆವಿಲ್ಲೆ ರಾಯ್ ಸಿಂಘಮ್‌ ಎಂಬುವವರಿಂದ ಹಣ ಪಡೆದಿದೆ ಮತ್ತು ಅವರು ಚೀನಾದಿಂದ ಹಣ ಪಡೆದಿದ್ದಾರೆ. ಈ ನೆವಿಲ್ಲೆ ರಾಯ್ ಸಿಂಘಮ್ ಚೀನಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಮತ್ತು ಮಾಧ್ಯಮ ಕಂಪನಿಯಾದ ಮಕು ಗ್ರೂಪ್‌ನ ಪ್ರಚಾರ ವಿಭಾಗದೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾರೆ' ಎಂದು ಅವರು ಹೇಳಿದರು.

ಈ ನ್ಯೂಸ್ ಪೋರ್ಟಲ್ ಹಿಂದೆ 'ವಿದೇಶಿ ಕೈಗಳು' ಇರುವುದು 2021ರಲ್ಲಿ ಬಹಿರಂಗವಾಯಿತು ಎಂದು ಅವರು ಹೇಳಿದರು.
ಉಚಿತ ಸುದ್ದಿಯ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅವರಿಗೆ ಬೆಂಬಲ ನೀಡುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯಾದ ಸುದ್ದಿಯನ್ನು ಪ್ರಸ್ತಾಪಿಸಿದರು. ಈ ವರದಿಯಲ್ಲಿ, ನ್ಯೂಸ್‌ಕ್ಲಿಕ್ ಚೀನಾದ ಸಂಸ್ಥೆಗಳಿಂದ ಹಣವನ್ನು ಪಡೆದಿದೆ ಮತ್ತು ಭಾರತ ವಿರೋಧಿ ಕೃತ್ಯಗಳಿಗಾಗಿ ಹಣವನ್ನು ಬಳಸಲಾಗಿದೆ ಎಂದು ಹೇಳಿದ್ದರು.

ಈ ಸಂಬಂಧ ಸುದ್ದಿ ಪೋರ್ಟಲ್ ಅಥವಾ ಕಾಂಗ್ರೆಸ್‌ನಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com