ದೆಹಲಿ ಸೇವಾ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೆಯೆ ಹೆಸರು ಸೇರ್ಪಡೆ: ಆಪ್ ವಿರುದ್ಧ ಐವರು ಸಂಸದರ ಆರೋಪ

ದೆಹಲಿ ಸೇವಾ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೇ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ರಾಜ್ಯಸಭೆಯ ಐದು ಸದಸ್ಯರು ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ
ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ

ನವದೆಹಲಿ: ದೆಹಲಿ ಸೇವಾ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೇ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ರಾಜ್ಯಸಭೆಯ ಐದು ಸದಸ್ಯರು ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿ ಸೇವೆಗಳ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ತಮ್ಮ "ನಕಲಿ ಸಹಿ" ಅನ್ನು ಸೇರಿಸಲಾಗಿದೆ.  ದೆಹಲಿ ಸೇವಾ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಆರೋಪಿಸಿ ರಾಜ್ಯಸಭಾ ಸಂಸದರಾದ, ಬಿಜೆಪಿಯ ಎಸ್ ಫಾಂಗ್ನಾನ್ ಕೊನ್ಯಾಕ್, ನರಹರಿ ಅಮೀನ್ ಮತ್ತು ಸುಧಾಂಶು ತ್ರಿವೇದಿ, ಎಐಎಡಿಎಂಕೆ ಸಂಸದ ಎಂ ತಂಬಿದುರೈ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಆಪ್ ನಾಯಕ ರಾಘವ್ ಚಡ್ಡಾ ವಿರುದ್ಧ ಸೋಮವಾರ ವಿಶೇಷ ಹಕ್ಕು ಮಂಡಿಸಲು ಒತ್ತಾಯಿಸಿದ್ದಾರೆ.

ಎಐಎಡಿಎಂಕೆ ಸಂಸದ ಎಂ ತಂಬಿದುರೈ ಈಗಾಗಲೇ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರಿಗೆ ಪತ್ರ ಬರೆದಿದ್ದು, ‘ಯಾವುದೇ ದಾಖಲೆಗೆ ಸಹಿ ಹಾಕದ ಕಾರಣ ನನ್ನ ಹೆಸರನ್ನು ಪ್ರಸ್ತಾವನೆಯಲ್ಲಿ ಹೇಗೆ ಸೇರಿಸಲಾಗಿದೆ ಎಂದು ವಿಶೇಷಾಧಿಕಾರ ಸಮಿತಿಗೆ ಸೂಚಿಸಿ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ನೀಡಿದ್ದೇನೆ. ಹಾಗಾಗಿ ಯಾರೋ ನನ್ನ ಸಹಿಯನ್ನು ನಕಲಿ ಮಾಡಿರಬಹುದು’ ಎಂದರು.

ಇದೇ ವಿಚಾರವಾಗಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಸಂಸದ ನರಹರಿ ಅಮೀನ್, "ರಾಘವ್ ಚಡ್ಡಾ ಅವರು ನನ್ನ ಹೆಸರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿದ್ದಾರೆ, ಅವರು ನನ್ನೊಂದಿಗೆ ಮಾತನಾಡಿಲ್ಲ, ನಾನು ಇದಕ್ಕೆ ಒಪ್ಪಿಗೆ ನೀಡಿಲ್ಲ, ಅವರು ತಪ್ಪು ಮಾಡಿದ್ದಾರೆ, ನಾನು ನನ್ನ ಸಹಿಯನ್ನು ನೀಡಿಲ್ಲ..." ಎಂದು ಹೇಳಿದರು.

ಅಂತೆಯೇ ಬಿಜೆಡಿಯ ಸಸ್ಮಿತ್ ಪಾತ್ರಾ ಅವರು ತಮ್ಮ ಒಪ್ಪಿಗೆಯಿಲ್ಲದೆ ಅವರ ಹೆಸರನ್ನು ಸೇರಿಸಿದ್ದಾರೆ ಎಂದು ಇದೇ ರೀತಿಯ ಆರೋಪಗಳನ್ನು ಮಾಡಿದ್ದು, "ಸದನದಲ್ಲಿ ನಿರ್ಣಯಗಳನ್ನು ಮಂಡಿಸಿದ ಸಮಯದಲ್ಲಿ (ದೆಹಲಿ ಸೇವಾ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ), ರಾಘವ್ ಚಡ್ಡಾ ಅವರು ಮಂಡಿಸಿದ ನಿರ್ಣಯದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ನಾನು ಕೇಳಿದೆ. ನನ್ನ ಪೂರ್ವಾನುಮತಿ ಪಡೆಯದೆ ನನ್ನ ಹೆಸರನ್ನು ಹೇಳಲಾಗುವುದಿಲ್ಲ. ಈ ಬಗ್ಗೆ ಸಭಾಪತಿ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ, ನಾನು ದೂರು ನೀಡಿದ್ದೇನೆ, ನಿಸ್ಸಂಶಯವಾಗಿ, ಇದು ಹಕ್ಕುಚ್ಯುತಿ ವಿಷಯವಾಗಿದೆ, ನಾವೆಲ್ಲರೂ ನಮ್ಮ ಆಯಾ ದೂರುಗಳನ್ನು ಸಲ್ಲಿಸಿದ್ದೇವೆ, ”ಎಂದು ಬಿಜು ಜನತಾ ದಳದ ಸಂಸದರು ಹೇಳಿದರು.

ಏತನ್ಮಧ್ಯೆ, ವಿಶೇಷಾಧಿಕಾರ ಸಮಿತಿಗೆ ನೋಟಿಸ್ ಕಳುಹಿಸಿದಾಗ ಉತ್ತರ ನೀಡುವುದಾಗಿ ಚಡ್ಡಾ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com