ನಾಲಿಗೆಯ ಮೇಲೆ ಹಿಡಿತವಿರಲಿ ಇಲ್ಲದಿದ್ದರೆ...’ ಪಂಜಾಬ್ ಗವರ್ನರ್ ಮತ್ತು ಸಿಎಂ ಮಾನ್ ನಡುವೆ ಮತ್ತೆ ಮಾತಿನ ಸಮರ!

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ಸಂಘರ್ಷ ಇದೀಗ ಪಂಜಾಬ್‌ನಲ್ಲೂ ಸೃಷ್ಟಿಯಾಗಿದೆ. ಪಂಜಾಬ್‌ನ ಎಎಪಿ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮುಖಾಮುಖಿಯಾಗಿದ್ದಾರೆ.
ಭಗವಂತ್ ಮಾನ್-ಬನ್ವರಿಲಾಲ್ ಪುರೋಹಿತ್
ಭಗವಂತ್ ಮಾನ್-ಬನ್ವರಿಲಾಲ್ ಪುರೋಹಿತ್

ಚಂಡೀಗಢ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ಸಂಘರ್ಷ ಇದೀಗ ಪಂಜಾಬ್‌ನಲ್ಲೂ ಸೃಷ್ಟಿಯಾಗಿದೆ. ಪಂಜಾಬ್‌ನ ಎಎಪಿ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮುಖಾಮುಖಿಯಾಗಿದ್ದಾರೆ.

 ಸದನದ ಹೊರಗೆ ಕೂಡ ತಮ್ಮ ಬಗ್ಗೆ ಅಸಭ್ಯ ಟೀಕೆಗಳನ್ನು ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಭಗವಂತ್ ಮಾನ್ ವಿರುದ್ಧ ಪುರೋಹಿತ್ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಭಗವಂತ್ ಮಾನ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

ಭಗವಂತ್ ಮಾನ್ ಸದನದೊಳಗೆ ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರು ಪತ್ರಗಳನ್ನು ಬರೆಯುತ್ತಲೇ ಇರುತ್ತಾರೆ. ನನ್ನ ಸಮಯ ಎಲ್ಲಿದೆ? ಅದೆಲ್ಲ ಸರಿಯಿಲ್ಲ. ಮುಖ್ಯಮಂತ್ರಿಗೆ ಸದನದಲ್ಲಿ ಸ್ವಲ್ಪ ರಕ್ಷಣೆ ಸಿಗುತ್ತದೆ. ಇದನ್ನೆಲ್ಲ ಅವರು ಸದನದ ಹೊರಗೆ ಹೇಳಲಿ. ಅವರು ಹಾಗೆ ಮಾಡಿದ ದಿನ, ನಾವು ಅವರ ವಿರುದ್ಧ ಐಪಿಸಿ ಸೆಕ್ಷನ್ 124 ರ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ. ಮಾನ್ ಯಾವುದೇ ರೀತಿಯ ಒತ್ತಡ ಹೇರಲು ಯತ್ನಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವಿದ್ದು, ಮುಖ್ಯಮಂತ್ರಿ ನಾಲಿಗೆಯ ಬಗ್ಗೆ ನಿಗಾ ವಹಿಸಿ ಅನಗತ್ಯ ನಿಂದನೆ ಮಾಡಬೇಡಿ ಎಂದರು.

ಗೌರವಾನ್ವಿತ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಒಂದು ವರ್ಷದಿಂದ ಜಗಳ ನಡೆಯುತ್ತಿದೆ. ಆಡಳಿತಾತ್ಮಕ ವಿಚಾರದಲ್ಲಿ ಅವರಿಂದ ಮಾಹಿತಿ ಕೇಳಿದಾಗ ನಿರ್ಲಕ್ಷ್ಯ ಮಾಡುತ್ತಾರೆ ಎಂದು ರಾಜ್ಯಪಾಲರು ಹೇಳಿದ್ದರು. ಇತ್ತೀಚೆಗೆ, ಎರಡು ದಿನಗಳ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಎರಡು ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಲಾಯಿತು. ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕದ ಹಕ್ಕನ್ನು ರಾಜ್ಯಪಾಲರಿಂದ ಕಸಿದುಕೊಳ್ಳುವ ಮಸೂದೆಯೂ ಇದರಲ್ಲಿತ್ತು. ರಾಜ್ಯಪಾಲರು ಈ ಅಧಿವೇಶನವನ್ನು ಅಸಾಂವಿಧಾನಿಕ ಎಂದು ಕರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com