ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ: ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅಮಾನತು

ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ.
ರಾಜ್ಯಸಭೆಯಲ್ಲಿ ಜಗದೀಪ್ ಧನ್ಖರ್ ಹಾಗೂ ಡೆರೆಕ್ ಒ’ಬ್ರಿಯಾನ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು.
ರಾಜ್ಯಸಭೆಯಲ್ಲಿ ಜಗದೀಪ್ ಧನ್ಖರ್ ಹಾಗೂ ಡೆರೆಕ್ ಒ’ಬ್ರಿಯಾನ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು.

ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ.

ತೃಣಮೂಲದ ಡೆರೆಕ್ ಒ'ಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸದನದ ಅಧ್ಯಕ್ಷ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು ಇಂದು ಘೋಷಿಸಿದ್ದಾರೆ.

ಮಂಗಳವಾರ ಸಭೆ ಆರಂಭವಾದಗಿನಿಂದ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಮಾತನಾಡಲು ಅಡ್ಡಿ ಪಡಿಸುತ್ತಿದ್ದರು. ಇದರಿಂದ ನಿರಂತರವಾಗಿ ಸದನದ ಕಲಾಪಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಭಾಪತಿ ಜಗದೀಪ್ ಧನ್ಖರ್ ಅವಿಧೇಯತೆ ಮತ್ತು ಸದನದಲ್ಲಿ ನಿರಂತರವಾಗಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಡೆರೆಕ್ ಅವರನ್ನು ಅಮಾನತು ಗೊಳಿಸಿದರು.

ಡೆರೆಕ್ ಅವರು ದೆಹಲಿ ಸೇವೆಗಳ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸದನಕ್ಕೆ ಅಡ್ಡಿಪಡಿಸಿದರು. ಮೇಲ್ಮನೆಯಲ್ಲಿ ಗದ್ದಲದ ನಡುವೆ, ವಿಪಿ ಧನ್​ಖರ್ ಅವರು ' ಡೆರೆಕ್ ಒ'ಬ್ರೇನ್ ಅವರಿಗೆ ಸದನದಿಂದ ಹೊರಹೋಗಬೇಕು ಎಂದು ಆದೇಶಿಸಿದರು. ಬಳಿಕ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದ್ದಾರೆ.

ಈ ನಡುವೆ ರಾಜ್ಯಸಭಾ ಸದಸ್ಯ ಟ್ವಿಟರ್​ನಲ್ಲಿ ಪ್ರಧಾನಿ ಮೋದಿ ಮೇಲ್ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಧಾನಿಯಲ್ಲಿ ಲೋಕಸಭೆಗೆ ಕರೆಸಲು ಅವಿಶ್ವಾಸ ನಿರ್ಣಯದ ನಿಯಮಗಳನ್ನು ತೆಗೆದುಕೊಳ್ಳಬೇಕಾಗಿದೆ. ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮಣಿಪುರದ ಚರ್ಚೆಯನ್ನು ಪ್ರಾರಂಭಿಸೋಣ ಎಂದು ಡೆರೆಕ್​ ಬರೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com