ಭಾರತದಲ್ಲಿ ಬಾಂಬ್ ಸ್ಫೋಟ, ಪ್ರಧಾನಿ ಮೋದಿಯನ್ನು ಕೊಲ್ಲುವ ಬೆದರಿಕೆ ಸಂದೇಶ; ತನಿಖೆ ಆರಂಭಿಸಿದ ಪುಣೆ ಪೊಲೀಸರು

ಮಹಾರಾಷ್ಟ್ರದ ಪುಣೆಯ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತಾದ ಸಂಗತಿಗಳಿಗೆ ಮೀಸಲಾದ ವೆಬ್‌ಸೈಟ್‌ಗೆ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬರಿಂದ ಕಾಮೆಂಟ್ ಬಂದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಮಹಾರಾಷ್ಟ್ರದ ಪುಣೆಯ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತಾದ ಸಂಗತಿಗಳಿಗೆ ಮೀಸಲಾದ ವೆಬ್‌ಸೈಟ್‌ಗೆ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬರಿಂದ ಕಾಮೆಂಟ್ ಬಂದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆಗಸ್ಟ್ 6ರಂದು ವೆಬ್‌ಸೈಟಿನಲ್ಲಿ ಕಾಮೆಂಟ್ ಮಾಡಿರುವ ಎಂಎ ಮೊಖೀಂ ಎಂಬ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇಲ್ಲಿನ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಪುಣೆ ಜಿಲ್ಲೆಯ ನಿವಾಸಿ ರಾಹುಲ್ ದುಧಾನೆ ಹಿಂದೂ ಧರ್ಮದ ಸತ್ಯಗಳಿಗೆ ಸಂಬಂಧಿಸಿದ ವೆಬ್‌ಸೈಟ್ ಅನ್ನು ನಡೆಸುತ್ತಿದ್ದಾರೆ. ಆಗಸ್ಟ್ 6 ರಂದು ಮಗನ ಚಿಕಿತ್ಸೆಗಾಗಿ ದುಧಾನೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ದುಧಾನೆ ಅವರು ತಮ್ಮ ವೆಬ್‌ಸೈಟ್ ಅನ್ನು ಪರಿಶೀಲಿಸುವಾಗ, ಎಂಎ ಮೊಖೀಂ ಎಂಬ ಹೆಸರಿನ ವ್ಯಕ್ತಿ, 'ನಾನು ಭಾರತದಲ್ಲಿ ಗಂಭೀರವಾದ ಬಾಂಬ್ ಸ್ಫೋಟವನ್ನು ಯೋಜಿಸುತ್ತಿದ್ದೇನೆ. ನಾನು ಭಯೋತ್ಪಾದಕ ಸಂಘಟನೆಗಳಿಗೆ ಹಣ ನೀಡುತ್ತೇನೆ. ನಾನು ಹಿಂದೂ ಧರ್ಮವನ್ನು ನಾಶಪಡಿಸುತ್ತೇನೆ. ನಾನು ಪ್ರಧಾನಿ ನರೇಂದ್ರ ಮೋದಿಯನ್ನು ಕೂಡ ಕೊಲ್ಲುತ್ತೇನೆ' ಎಂದು ಕಾಮೆಂಟ್ ಮಾಡಿರುವುದು ಕಂಡುಬಂದಿದೆ.

ನಂತರ ದುಧಾನೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕಾಮೆಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ (ವಲಯ III), ಇದು ವೆಬ್‌ಸೈಟ್‌ನಲ್ಲಿ ಮುಕ್ತ ಕಾಮೆಂಟ್ ಆಗಿದೆ. 'ನಾವು ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ. ಐಪಿ ವಿಳಾಸವು ಭಾರತದಿಂದ ಹೊರಗಿದೆ ಎಂದು ತೋರುತ್ತಿದೆ ಮತ್ತು ನಾವು ಅದನ್ನು ಪರಿಶೀಲಿಸುತ್ತಿದ್ದೇವೆ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com