ಸುಪ್ರೀಂ ಕೋರ್ಟ್ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ; ಇ-ಪಾಸ್ ಪೋರ್ಟಲ್ ಆರಂಭ- ಸಿಜೆಐ ಘೋಷಣೆ

ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ ಪ್ರವೇಶಿಸಲು ಇ-ಪಾಸ್‌ ಪಡೆಯಲು ಇನ್ನೂ ಸರದಿಯಲ್ಲಿ ನಿಲ್ಲಬೇಕಿಲ್ಲ, ಇದಕ್ಕೆ ಅನುವು ಮಾಡಿಕೊಡಲು ಸುಸ್ವಾಗತಂ' ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ.
ಮುಖ್ಯ ನ್ಯಾಯಾಧೀಶ ಚಂದ್ರಚೂಡ್
ಮುಖ್ಯ ನ್ಯಾಯಾಧೀಶ ಚಂದ್ರಚೂಡ್
Updated on

ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ ಪ್ರವೇಶಿಸಲು ಇ-ಪಾಸ್‌ ಪಡೆಯಲು ಇನ್ನೂ ಸರದಿಯಲ್ಲಿ ನಿಲ್ಲಬೇಕಿಲ್ಲ, ಇದಕ್ಕೆ ಅನುವು ಮಾಡಿಕೊಡಲು ಸುಸ್ವಾಗತಂ' ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ. ಸಿಜೆಐ ಚಂದ್ರಚೂಡ್ ಈ ಆನ್‌ಲೈನ್ ಸೌಲಭ್ಯದ ಬಗ್ಗೆ ಪ್ರಕಟಿಸಿದ್ದಾರೆ. ಇದರ ಮೂಲಕ ವಕೀಲರು, ಸಂದರ್ಶಕರು, ಮತ್ತಿತರರು ಇತರರು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಇ-ಪಾಸ್ ಪಡೆಯಬಹುದಾಗಿದೆ. 

ಸುಸ್ವಾಗತಂ' ವೆಬ್ ಆಧಾರಿತ ಮತ್ತು ಮೊಬೈಲ್ ಸ್ನೇಹಿ ಆಪ್ ಆಗಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಲು, ವಕೀಲರನ್ನು ಭೇಟಿ ಮಾಡುವಂತಹ ವಿವಿಧ ಉದ್ದೇಶಗಳಿಗೆ ಬಳಕೆದಾರರು ಆನ್ ಲೈನ್ ನಲ್ಲಿ ನೋಂದಣಿಯಾಗಲು ಮತ್ತು ಇ- ಪಾಸ್ ಪಡೆಯಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು ಸಿಜೆಐ ಹೇಳಿದ್ದಾರೆ. 

"ಸುಸ್ವಾಗತಂ' ಪೋರ್ಟಲ್ ನ್ನು ಜುಲೈ 25, 2023 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಆಗಸ್ಟ್ 9 ರವರೆಗೆ ಪ್ರಾಯೋಗಿಕವಾಗಿ 10 ಸಾವಿರಕ್ಕೂ ಹೆಚ್ಚು ಇ-ಪಾಸ್‌ಗಳನ್ನು ಪೋರ್ಟಲ್ ಮೂಲಕ ವಿತರಿಸಲಾಗಿದೆ. ನೀವು ಬೆಳಿಗ್ಗೆ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಆನ್ ಲೈನ್ ನಲ್ಲಿಯೇ ಎಲ್ಲಾ ಪಾಸ್ ಗಳು ದೊರೆಯುತ್ತವೆ. ಇಂದು ಬೆಳಿಗ್ಗೆಯಿಂದಲೇ ಈ  ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಸಿಜೆಐ ತಿಳಿಸಿದ್ದಾರೆ. 

ಎಂಟ್ರಿಪಾಸ್ ಪಡೆಯಲು ಕೋರ್ಟನ ಕೌಂಟರ್ ಮುಂದೆ ಬೆಳಗೆ ಹೊತ್ತು ಬಹಳ ಹೊತ್ತು ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಅರ್ಜಿಯನ್ನು ಹೇಗೆ ಬಳಸುವುದು ಎಂಬುದರ ಕುರಿತು ವೀಡಿಯೊ ಟ್ಯುಟೋರಿಯಲ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com