ಕೇವಲ 3 ನಿಮಿಷಗಳು!: ಪ್ರಧಾನಿ ಭಾಷಣದಲ್ಲಿ ಮಣಿಪುರದ ವಿಷಯಕ್ಕೆ ಮೀಸಲಿಟ್ಟ ಸಮಯದ ಬಗ್ಗೆ ಪ್ರತಿಪಕ್ಷಗಳ ಆಕ್ಷೇಪ!

ಪ್ರಧಾನಿ ನರೇಂದ್ರ ಮೋದಿ ನೆನ್ನೆ ಸಂಸತ್ ಭಾಷಣದಲ್ಲಿ ಮಣಿಪುರದ ವಿಷಯವಾಗಿ ಮಾತನಾಡಲು ಕೇವಲ 3 ನಿಮಿಷಗಳಷ್ಟು ಸಮಯವನ್ನು ಮಾತ್ರ ನೀಡಿದರು ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. 
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೆನ್ನೆ ಸಂಸತ್ ಭಾಷಣದಲ್ಲಿ ಮಣಿಪುರದ ವಿಷಯವಾಗಿ ಮಾತನಾಡಲು ಕೇವಲ 3 ನಿಮಿಷಗಳಷ್ಟು ಸಮಯವನ್ನು ಮಾತ್ರ ನೀಡಿದರು ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. 

ಪ್ರಧಾನಿ ಮೋದಿ ಅವಿಶ್ವಾಸ ನಿರ್ಣಯದ ಬಗ್ಗೆ ನೆನ್ನೆ ಸುದೀರ್ಘ 2 ವರೆ ಗಂಟೆಗಳ ಕಾಲ ಮಾತನಾಡಿದ್ದರು. ಪ್ರಧಾನಿಗೆ ಟ್ವಿಟರ್ ನಲ್ಲಿ ಮೂರು ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮಣಿಪುರದ ಪ್ರಾದೇಶಿಕ ಸಮಗ್ರತೆ ಬಗ್ಗೆ ಏಕೆ ಮೌನ ವಹಿಸಿದ್ದರು? ಪ್ರಧಾನಿ ಮೋದಿ ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತಾರೆ? ಎಂದು ಪ್ರಶ್ನಿಸಲಾಗಿದೆ.

2 ಗಂಟೆಗಳ ಕಾಲ ಮಾತನಾಡಿರುವ ಪ್ರಧಾನಿ, ಮಣಿಪುರದ ಬಗ್ಗೆ ಮಾತನಾಡುವ ಮತ್ತು ಅಲ್ಲಿನ ಜನರ ನೋವು ಹಂಚಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು ಹೆಚ್ಚಿನ ಸಮಯ ಬಳಸಿದರು ಎಂದು ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com