ಚಂದ್ರಯಾನ-3 ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿ
ಚಂದ್ರಯಾನ-3 ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿ

ಚಂದ್ರಯಾನ-3 ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿ: ಇಸ್ರೋ

ಚಂದ್ರಯಾನ-3 ರಲ್ಲಿ ಇಸ್ರೋ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಬೆಂಗಳೂರು: ಚಂದ್ರಯಾನ-3 ರಲ್ಲಿ ಇಸ್ರೋ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
 
ಪ್ರೊಪಲ್ಷನ್ ಮಾಡ್ಯೂಲ್ ನಿಂದ ಪ್ರತ್ಯೇಕಗೊಂಡ ಲ್ಯಾಂಡರ್, ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ್ದು, ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ನಾಳೆ ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆಯಲಿದ್ದು, ಲ್ಯಾಂಡರ್ ನ್ನು ಹಂತ ಹಂತವಾಗಿ ಚಂದ್ರನ ಮೇಲ್ಮೈ ಗೆ ಇಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. 

ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆ ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ (ಆಗಸ್ಟ್ 6, 9 ಹಾಗೂ 14) ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com