ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ತನಿಖೆ ಇಲ್ಲದೆ ಉತ್ತರ ಪ್ರದೇಶ ಉದ್ಯಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಡಿ: ಸಿಎಂ ಯೋಗಿ ಆದೇಶ

ಹಣಕಾಸಿನ ವಿಷಯಗಳು ಅಥವಾ ಪರಸ್ಪರ ವ್ಯವಹಾರದ ಸಮಯದಲ್ಲಿ ಅನೇಕ ಬಾರಿ ಉದ್ಯಮಿಗಳು ಪೊಲೀಸರ ಕಿರುಕುಳಕ್ಕೆ ಗುರಿಯಾಗಬೇಕಾಗುತ್ತದೆ. ಕೆಲ ವೇಳೆ ಜನರು ಉದ್ಯಮಿಗಳ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸುತ್ತಾರೆ. ಇಂತಹ ವಿಷಯಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಗಮನಕ್ಕೆ ತಂದಿದ್ದಾರೆ.

ಲಖನೌ: ಹಣಕಾಸಿನ ವಿಷಯಗಳು ಅಥವಾ ಪರಸ್ಪರ ವ್ಯವಹಾರದ ಸಮಯದಲ್ಲಿ ಅನೇಕ ಬಾರಿ ಉದ್ಯಮಿಗಳು ಪೊಲೀಸರ ಕಿರುಕುಳಕ್ಕೆ ಗುರಿಯಾಗಬೇಕಾಗುತ್ತದೆ. ಕೆಲ ವೇಳೆ ಜನರು ಉದ್ಯಮಿಗಳ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸುತ್ತಾರೆ. ಇಂತಹ ವಿಷಯಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಗಮನಕ್ಕೆ ತಂದಿದ್ದಾರೆ. 

ಹೀಗಾಗಿ ಸಿಎಂ ಯೋಗಿ ರಾಜ್ಯದ ವ್ಯಾಪಾರಿಗಳು ಮತ್ತು ಉದ್ಯಮಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಉದ್ಯಮಿಗಳಿಗೆ ಈ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಲಾಗಿದೆ. ಉದ್ಯಮಿಗಳಿಗೆ ಕಿರುಕುಳ ನೀಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

ನಕಲಿ ಎಫ್‌ಐಆರ್‌ಗಳ ಸಂಖ್ಯೆ ಹೆಚ್ಚಾಗುತ್ತದೆ
ವಾಸ್ತವವಾಗಿ ಉದ್ಯಮಿಗಳು ಮತ್ತು ವೃತ್ತಿಪರ ಸೇವಾ ಪೂರೈಕೆದಾರರು ಸಾಮಾನ್ಯವಾಗಿ ನಕಲಿ ದೂರುಗಳು ಮತ್ತು ಎಫ್‌ಐಆರ್‌ಗಳನ್ನು ಎದುರಿಸಬೇಕಾಗುತ್ತದೆ. ಜನರು ಉತ್ಪನ್ನ ಮತ್ತು ಸೇವೆಯನ್ನು ಪಡೆಯುವುದು ಹಲವು ಬಾರಿ ಕಂಡುಬಂದಿದೆ. ಆದರೆ ಪಾವತಿ ಪ್ರಕ್ರಿಯೆಯಲ್ಲಿ, ಖರೀದಿದಾರರು ನಕಲಿ ದೂರುಗಳೊಂದಿಗೆ ಪೊಲೀಸ್ ಠಾಣೆಗೆ ಹೋಗುತ್ತಾರೆ.

ರಾಜ್ಯದಲ್ಲಿ ಕೆಲವರು ಕೇವಲ ಕಿರುಕುಳ ನೀಡುವ ಉದ್ದೇಶದಿಂದ ವ್ಯಾಪಾರಿಗಳು ಮತ್ತು ಉದ್ಯಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸುತ್ತಾರೆ. ಇದಾದ ನಂತರ ತನಿಖೆಯ ಹೆಸರಿನಲ್ಲಿ ಪೊಲೀಸರ ಕಡೆಯಿಂದ ಕಿರುಕುಳದ ಪ್ರಕ್ರಿಯೆ ಶುರುವಾಗುತ್ತದೆ. ಈ ಕುರಿತಂತೆ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ ನಂತರ, ಈಗ ಯುಪಿ ಸರ್ಕಾರವು ಪ್ರಾಥಮಿಕ ತನಿಖೆಯನ್ನು ಕಡ್ಡಾಯಗೊಳಿಸಲು ಆದೇಶವನ್ನು ನೀಡಿದೆ. ಈ ಪ್ರಕ್ರಿಯೆಯ ನಂತರ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸುವ ದೂರುಗಳು ಶೀಘ್ರವಾಗಿ ಕಡಿಮೆಯಾಗಲಿವೆ ಎಂದು ನಂಬಲಾಗಿದೆ. ಇದರಿಂದ ಪ್ರಾಮಾಣಿಕ ಉದ್ಯಮಿಗಳಿಗೆ ನೆಮ್ಮದಿ ಸಿಗಲಿದೆ.

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸರ್ಕಾರವು ನಿರಂತರವಾಗಿ ರಾಜ್ಯದಲ್ಲಿ ಹೂಡಿಕೆಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದರಲ್ಲಿ ಸರಕಾರಕ್ಕೂ ನಿರಂತರ ಯಶಸ್ಸು ಸಿಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈಸಿ ಆಫ್ ಡೂಯಿಂಗ್ ಬಿಸಿನೆಸ್‌ಗಾಗಿ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ನಿಲ್ಲಿಸುವುದು ಬಹಳ ಮುಖ್ಯವಾಗುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com