ಲ್ಯಾಂಡಿಂಗ್ ಪ್ರಕ್ರಿಯೆಗೂ ಮುನ್ನ ರಷ್ಯಾದ ಲುನಾ-25 ಗೆ ಎದುರಾಯ್ತು ಸಮಸ್ಯೆ!
ನವದೆಹಲಿ: ಚಂದ್ರನ ಮೇಲ್ಮೈನಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಗೂ ಮುನ್ನ ರಷ್ಯಾದ ಲುನಾ-25 ಪ್ರೋಬ್ ಗೆ ತುರ್ತಾಗಿ ಬಗೆಹರಿಸಬೇಕಾದ ಸಮಸ್ಯೆ ಎದುರಾಗಿದೆ.
ರಷ್ಯಾ ಸ್ಪೇಸ್ ಏಜೆನ್ಸಿ ರೋಸ್ಕೊಸ್ಮೊಸ್ ಈ ಬಗ್ಗೆ ಮಾಹಿತಿ ನೀಡಿದೆ. "ತನಿಖೆಯನ್ನು ಪೂರ್ವ-ಲ್ಯಾಂಡಿಂಗ್ ಕಕ್ಷೆಗೆ ವರ್ಗಾಯಿಸಲು ಥ್ರಸ್ಟ್ ಅನ್ನು ಬಿಡುಗಡೆ ಮಾಡಲಾಗಿದೆ" ಎಂದು ರೋಸ್ಕೋಸ್ಮಾಸ್ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕ್ರಿಯೆ ವೇಳೆ, ಆನ್ ಬೋರ್ಡ್ ನಲ್ಲಿ ತುರ್ತು ಸ್ಥಿತಿ ಎದುರಾಗಿದ್ದು, ನಿಗದಿತ ಪರಿಸ್ಥಿತಿಗಳಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ನಡೆಸಲು ಅಡ್ಡಿಯಾಗಿದೆ ಎಂದು ರೋಸ್ಕೋಸ್ಮಾಸ್ ತಿಳಿಸಿದೆ.
50 ವರ್ಷಗಳಲ್ಲೇ ಇದು ರಷ್ಯಾದಿಂದ ಕೈಗೊಳ್ಳಲಾಗುತ್ತಿರುವ ಮೊದಲ ಇಂತಹ ಮೊದಲ ಮಿಷನ್ ಆಗಿದ್ದು, ಬುಧವಾರದಂದು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿತ್ತು.
ಈಗ ಎದುರಾಗಿರುವ ಸಮಸ್ಯೆಯಿಂದಾಗಿ ಲುನಾ-25 ಪ್ರೋಬ್ ಲ್ಯಾಂಡಿಂಗ್ ನಲ್ಲಿ ವಿಳಂಬವಾಗಲಿದೆಯೇ? ಎಂಬುದನ್ನು ರಷ್ಯಾ ಈ ವರೆಗೂ ಸ್ಪಷ್ಟಪಡಿಸಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೋಮವಾರದಂದು ಲುನಾ-25 ಪ್ರೋಬ್ ಚಂದ್ರದ ದಕ್ಷಿಣ ದ್ರುವದಲ್ಲಿ ಲ್ಯಾಂಡ್ ಆಗಬೇಕಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ