ಅಯೋಧ್ಯೆಯ ರಾಮ ಜನ್ಮಭೂಮಿ, ಹನುಮಾನ್ ಗರ್ಹಿ ದೇವಾಲಯಲ್ಲಿ ಪೂಜೆ ಸಲ್ಲಿಸಿದ ರಜನಿಕಾಂತ್

ಸಿನಿಮಾ ನಟ ರಜನಿಕಾಂತ್ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದು, ರಾಮಜನ್ಮಭೂಮಿ, ಹನುಮಾನ್ ಗರ್ಹಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. 
ಹನುಮಾನ್ ಗರ್ಹಿ ದೇವಾಲಯಲ್ಲಿ ಪೂಜೆ ಸಲ್ಲಿಸಿದ ರಜನಿಕಾಂತ್
ಹನುಮಾನ್ ಗರ್ಹಿ ದೇವಾಲಯಲ್ಲಿ ಪೂಜೆ ಸಲ್ಲಿಸಿದ ರಜನಿಕಾಂತ್
Updated on

ಅಯೋಧ್ಯೆ: ಸಿನಿಮಾ ನಟ ರಜನಿಕಾಂತ್ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದು, ರಾಮಜನ್ಮಭೂಮಿ, ಹನುಮಾನ್ ಗರ್ಹಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. 

ಇಲ್ಲಿಗೆ ಭೇಟಿ ನೀಡಬೇಕು ಎಂದು ಬಹಳ ಸಮಯದಿಂದ ಅಂದುಕೊಂಡಿದ್ದೆ. ಈಗ ಅದು ಈಡೇರಿದೆ. ರಾಮ ಮಂದಿರ ನಿರ್ಮಾಣವಾದ ಬಳಿಕ ದೇವರು ಇಚ್ಛಿಸಿದರೆ ನಾನು ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ರಜನಿಕಾಂತ್ ವರದಿಗಾರರಿಗೆ ಹೇಳಿದ್ದಾರೆ.

ರಾಮಜನ್ಮಭೂಮಿಗೆ ರಜನಿಕಾಂತ್ ಅವರನ್ನು ಹಿರಿಯ ಅಧಿಕಾರಿಗಳು, ಅಯೋಧ್ಯೆ ಆಯುಕ್ತ, ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಕುಮಾರ್ ಮತ್ತು ಮುನ್ಸಿಪಲ್ ಕಮಿಷನರ್ ವಿಶಾಲ್ ಸಿಂಗ್ ಸ್ವಾಗತಿಸಿದರು.

ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ರಜನಿಕಾಂತ್ ಅವರಿಗೆ ರಾಮಮಂದಿರದ ಮಾದರಿ ಮತ್ತು ಅದರ ಮೇಲೆ ಶ್ರೀರಾಮನ ಹೆಸರನ್ನು ನೇಯ್ದ ಸ್ಟೋಲ್ (ಶಾಲು)ನ್ನು ಉಡುಗೊರೆಯಾಗಿ ನೀಡಿದರು.

ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ರಜನಿಕಾಂತ್ 10 ನಿಮಿಷಗಳ ಕಾಲ ಇದ್ದರು ಎಂದು ಮಹಾಂತ್ ರಾಜು ದಾಸ್ ಹೇಳಿದ್ದಾರೆ. 

"ನಾನು ರಜನಿಕಾಂತ್ ಜೀ ಅವರಿಗೆ ನನ್ನ ಧನ್ಯವಾದಗಳನ್ನು ವ್ಯಕ್ತಪಡಿಸುತ್ತೇನೆ... ಇಂದು, ದೇಶದ ವಿವಿಧ ಭಾಗಗಳ ಜನರು, ವಿವಿಧ ವೃತ್ತಿಗಳು ಮತ್ತು ಬಾಲಿವುಡ್ ಜನರು ಅಯೋಧ್ಯೆಯತ್ತ ಆಕರ್ಷಿತರಾಗುತ್ತಿದ್ದಾರೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com