ಚಂದ್ರಯಾನ-3 ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ ರೋವರ್: ಇಸ್ರೋಗೆ ನಾಸಾ, ಪುಟಿನ್ ಸೇರಿ ಗಣ್ಯರಿಂದ ಅಭಿನಂದನೆ 

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಹೊರಬಂದಿದ್ದು ತನ್ನ ಅನ್ವೇಷಣೆಯನ್ನು ಪ್ರಾರಂಭಿಸಿದೆ. 
ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ ರೋವರ್
ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ ರೋವರ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಹೊರಬಂದಿದ್ದು ತನ್ನ ಅನ್ವೇಷಣೆಯನ್ನು ಪ್ರಾರಂಭಿಸಿದೆ. 

ಲ್ಯಾಂಡರ್ ನಿಂದ ಹೊರಬಂದ ರೋವರ್ ನ ಫೋಟೋ ಈಗ ಬಹಿರಂಗವಾಗಿದೆ. ಈ ನಡುವೆ ಇಸ್ರೋ ಸಂಸ್ಥೆಯ ಯಶಸ್ಸಿಗೆ ಬ್ರಿಟನ್ ಬಾಹ್ಯಾಕಾಶ ಸಂಸ್ಥೆ, ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿನಂದನೆ ಸಲ್ಲಿಸಿವೆ. 

"ಇಂಜಿನಿಯರಿಂಗ್ ಮತ್ತು ಪರಿಶ್ರಮದ ಈ ಅದ್ಭುತ ಸಾಧನೆಗಾಗಿ ಭಾರತಕ್ಕೆ ಅಭಿನಂದನೆಗಳು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ನಾವು ಹೊಸ ಬಾಹ್ಯಾಕಾಶ ಯುಗದಲ್ಲಿ ವಾಸಿಸುತ್ತಿದ್ದೇವೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಯಾಗಿದೆ, ವಿಶ್ವದಾದ್ಯಂತ ಬಾಹ್ಯಾಕಾಶ ಏಜೆನ್ಸಿಗಳು ಮತ್ತು ಕಂಪನಿಗಳು ಚಂದ್ರನ ಮೇಲೆ ಮತ್ತು ಅದರಾಚೆಗೆ ದೃಷ್ಟಿ ನೆಟ್ಟಿವೆ " ಎಂದು ಬ್ರಿಟನ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಚಾಂಪಿಯನ್‌ನಿಂಗ್ ಸ್ಪೇಸ್‌ನ ನಿರ್ದೇಶಕರಾಗಿರುವ ಅನು ಓಜಾ OBE ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇಸ್ರೋ ಯಶಸ್ಸಿನ ಬಗ್ಗೆ ಟ್ವೀಟ್ ಮಾಡಿರುವ ನಾಸಾ, ಈ ಮಿಷನ್ ನಲ್ಲಿ ಪಾಲುದಾರನಾಗಿರುವುದಕ್ಕೆ ಸಂತೋಷವಾಗುತ್ತದೆ ಎಂದು ಹೇಳಿದೆ.

ವ್ಲಾದಿಮಿರ್ ಪುಟಿನ್ ಸಹ ಟ್ವೀಟ್ ಮಾಡಿ ಭಾರತದ  ಚಂದ್ರಯಾನ-3ನ ಯಶಸ್ವಿ ಲ್ಯಾಂಡಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದರ ಪ್ರಭಾವಶಾಲಿ ಪ್ರಗತಿಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com