ಚಂದ್ರನ ಮೇಲೆ ಲ್ಯಾಂಡರ್‌ನಿಂದ ರೋವರ್ ಪ್ರಗ್ಯಾನ್ ಹೊರಡುವ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಭಾರತದ ರೋಬೋಟ್‌ಗಳಾದ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಮೇಲ್ಮೈಯಿಂದ ತೆಗೆದ ಮೊದಲ ಸೆಲ್ಫಿಗಳನ್ನು ಹಂಚಿಕೊಳ್ಳುವುದರೊಂದಿಗೆ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಕ್ಷಣವು ಕೊನೆಗೂ ಬಂದಿದೆ.
ಇಸ್ರೊ ಬಿಡುಗಡೆ ಮಾಡಿರುವ ಚಿತ್ರ
ಇಸ್ರೊ ಬಿಡುಗಡೆ ಮಾಡಿರುವ ಚಿತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಭಾರತದ ರೋಬೋಟ್‌ಗಳಾದ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಮೇಲ್ಮೈಯಿಂದ ತೆಗೆದ ಮೊದಲ ಸೆಲ್ಫಿಗಳನ್ನು ಹಂಚಿಕೊಳ್ಳುವುದರೊಂದಿಗೆ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಕ್ಷಣವು ಕೊನೆಗೂ ಬಂದಿದೆ.

ಪ್ರಗ್ಯಾನ್ ರೋವರ್ ಶರ ವೇಗದಲ್ಲಿದ್ದಂತೆ ವಿಕ್ರಮ್ ಲ್ಯಾಂಡರ್ ಅದರ ರಾಂಪ್‌ನ ಚಿತ್ರಗಳನ್ನು ಮತ್ತು ವೀಡಿಯೊವನ್ನು ತೆಗೆದುಕೊಂಡಿತು.

ಟ್ವೀಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಇಸ್ರೋ, ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ ಎಂದು ಬರೆದಿದೆ.

ಚಂದ್ರಯಾನ-3 ಮೊನ್ನೆ ಆಗಸ್ಟ್ 23ರಂದು ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನ್ನು ಯಶಸ್ವಿಯಾಗಿ ನಡೆಸಿತು, ಭಾರತವು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿದೆ. ಸುಮಾರು 4 ಗಂಟೆಗಳ ನಂತರ, ಪ್ರಗ್ಯಾನ್ ರೋವರ್ ಮೇಲ್ಮೈಯಲ್ಲಿ ಹೊರಬಂದಿತು, ಈ ಕ್ಷಣವನ್ನು ಇಸ್ರೋ ಹಂಚಿಕೊಂಡ ಇತ್ತೀಚಿನ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದ ಕಲರ್ ವೀಡಿಯೋದಲ್ಲಿ ಪ್ರಗ್ಯಾನ್ ರೋವರ್‌ನ ಸೌರ ಫಲಕವು ಸೂರ್ಯನ ಬೆಳಕನ್ನು ಪಡೆಯುತ್ತಿದೆ. ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್‌ನ ಸುಂದರವಾದ ನೆರಳು ಕೂಡ ಕಂಡುಬರುತ್ತಿದೆ.

ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಲು ಯಾವುದೇ ಬಾಹ್ಯಾಕಾಶ ನೌಕೆಗೆ ಸಾಧ್ಯವಾಗದ ಕಾರಣ ಚಂದ್ರಯಾನ-3 ರ ಸಾಧನೆ ವಿಶೇಷವಾಗಿದೆ. ಇಲ್ಲಿ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಕ್ರಮ್ ತುಲನಾತ್ಮಕವಾಗಿ ಬಯಲು ಪ್ರದೇಶಕ್ಕೆ ಬಂದಿಳಿದಿದ್ದಾರೆ ಎಂದು ತೋರಿಸುತ್ತದೆ, ಅದು ಪ್ರಗ್ಯಾನ್ ಮೂನ್‌ವಾಕ್ ಮಾಡಲು ಅವಕಾಶವನ್ನು ನೀಡುತ್ತದೆ.

ವಿಕ್ರಮ್ ಬಂದಿಳಿದ ಚಂದ್ರನ ಮೇಲೆ ಸೂರ್ಯನ ಬೆಳಕು 14 ದಿನಗಳ ಕಾಲ ಇರಲಿದ್ದು, ರೋವರ್ ಈಗಾಗಲೇ ವೈಜ್ಞಾನಿಕ ಪ್ರಯೋಗಗಳ ಸರಣಿಯನ್ನು ಆರಂಭಿಸಿದೆ. ಚಂದ್ರಯಾನ-3 ಮಿಷನ್‌ನ ಸಂಶೋಧನೆಗಳು ಚಂದ್ರನ ನೀರಿನ ಮಂಜುಗಡ್ಡೆಯ ಜ್ಞಾನವನ್ನು ವಿಸ್ತರಿಸಬಹುದು, ಇದು ಚಂದ್ರನ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com