ತಮಿಳುನಾಡು: ಊಟಿಯ ಪ್ರಸಿದ್ಧ ಚಾಕೊಲೇಟ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ- ವಿಡಿಯೋ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಮಿಳುನಾಡಿನ ಊಟಿಯ ಪ್ರಸಿದ್ಧ ಚಾಕೊಲೇಟ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದರು. ಇದು  70 ಮಂದಿ ಮಹಿಳೆಯರ ತಂಡವೇ ನಡೆಸುತ್ತಿರುವ ಕಾರ್ಖಾನೆಯಾಗಿದ್ದು, ಅಲ್ಲಿನ ಮಹಿಳೆಯರೊಂದಿಗೆ ಸಂವಾದ ನಡೆಸಿದರು.  
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಊಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಮಿಳುನಾಡಿನ ಊಟಿಯ ಪ್ರಸಿದ್ಧ ಚಾಕೊಲೇಟ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದರು. ಇದು  70 ಮಂದಿ ಮಹಿಳೆಯರ ತಂಡವೇ ನಡೆಸುತ್ತಿರುವ ಕಾರ್ಖಾನೆಯಾಗಿದ್ದು, ಅಲ್ಲಿನ ಮಹಿಳೆಯರೊಂದಿಗೆ ಸಂವಾದ ನಡೆಸಿದರು.  

ಈ ಕುರಿತ ವಿಡಿಯೋವೊಂದನ್ನು ರಾಹುಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮೋಡಿಸ್ ಚಾಕೊಲೇಟ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದಿದ್ದಾರೆ.

ಏಳು ನಿಮಿಷಗಳ ವಿಡಿಯೋದಲ್ಲಿ ರಾಹುಲ್ ಕೂಡಾ ಬೇಕರ್ ಆಗಿ ಬದಲಾಗಿದ್ದು, ಮಹಿಳಾ ಕಾರ್ಮಿಕರೊಂದಿಗೆ ಚರ್ಚಿಸುತ್ತಾ ತಮಿಳು ಕಲಿಯಲು ಪ್ರಯತ್ನಿಸಿದ್ದಾರೆ.  ಮಹಿಳಾ ಕಾರ್ಮಿಕರಿಂದ ಮೋಡಿಸ್ ಚಾಕೊಲೇಟ್ ತಯಾರಿಸುವ ಬಗ್ಗೆ ಮಾಹಿತಿ ಪಡೆದಿದ್ದಾರೆ. 

“ಈ ಸಣ್ಣ ಉದ್ಯಮದ ಹಿಂದಿರುವ ದಂಪತಿಗಳಾದ ಮುರಳೀಧರ್ ರಾವ್ ಮತ್ತು ಸ್ವಾತಿ ಅವರ ಉದ್ಯಮಶೀಲತಾ ಮನೋಭಾವವು ಸ್ಪೂರ್ತಿದಾಯಕವಾಗಿದೆ. ಅವರ ಜೊತೆಯಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ತಂಡವೂ ಅಷ್ಟೇ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ. 

ರಾಜ್ಯ ಕಾಂಗ್ರೆಸ್ ಕೂಡಾ ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com