ಗುಜರಾತ್: ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ಯಿಯ ಬಂಧನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ  ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಚಂದ್ರಯಾನ-3 ಉಡಾವಣೆ ಸಂದರ್ಭ
ಚಂದ್ರಯಾನ-3 ಉಡಾವಣೆ ಸಂದರ್ಭ

ಸೂರತ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ  ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ನಕಲಿ ವಿಜ್ಞಾನಿ, ತಾನು ಇಸ್ರೋ ವಿಜ್ಞಾನಿಯಾಗಿದ್ದು, ಚಂದ್ರಯಾನ -3 ಮಿಷನ್‌ಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 24 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವುದನ್ನು ಗಮನಿಸಿದ ನಂತರ ಆರೋಪಿ ಮಿಥುಲ್ ತ್ರಿವೇದಿ ವಿರುದ್ಧ ದೂರು ದಾಖಲಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ತ್ರಿವೇದಿ ತಾನು ಇಸ್ರೋದ "ಪ್ರಾಚೀನ ವಿಜ್ಞಾನ ಅಪ್ಲಿಕೇಶನ್ ವಿಭಾಗದ" "ಸಹಾಯಕ ಅಧ್ಯಕ್ಷ" ಎಂದು ಹೇಳಿಕೊಂಡಿದ್ದು, ಈ ಸಂಬಂಧ ಫೆಬ್ರವರಿ 26, 2022 ರಂದು ನಕಲಿ ನೇಮಕಾತಿ ಪತ್ರವನ್ನು ಸಹ ತಯಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com