20 ಲಕ್ಷ ರೂ. ಲಂಚ ಸ್ವೀಕರಿಸಿದ ಇಡಿ ಅಧಿಕಾರಿಯನ್ನು ಚೇಸ್ ಮಾಡಿ ಬಂಧಿಸಿದ ತಮಿಳುನಾಡು ಪೊಲೀಸರು!

20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಶುಕ್ರವಾರ ದಿಂಡಿಗಲ್-ಮಧುರೈ ಹೆದ್ದಾರಿಯಲ್ಲಿ ಎಂಟು ಕಿಲೋಮೀಟರ್ ಚೇಸ್ ಮಾಡಿ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಧುರೈ: 20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಶುಕ್ರವಾರ ದಿಂಡಿಗಲ್-ಮಧುರೈ ಹೆದ್ದಾರಿಯಲ್ಲಿ ಎಂಟು ಕಿಲೋಮೀಟರ್ ಚೇಸ್ ಮಾಡಿ ಬಂಧಿಸಿದ್ದಾರೆ.

ದಿಂಡಿಗಲ್ ಜಿಲ್ಲೆಯ ಸರ್ಕಾರಿ ವೈದ್ಯರ ಅಕ್ರಮ ಆದಾಯ ಪ್ರಕರಣದ ತನಿಖೆ ನಡೆಸುತ್ತಿದ್ದ ಇಡಿ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ತಮಿಳುನಾಡು ಭ್ರಷ್ಟಾಚಾರ ನಿಗ್ರಹ ವಿಭಾಗ - ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ(ಡಿವಿಎಸಿ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಡ್ರಾಪ್-ಆಫ್ ಪಾಯಿಂಟ್‌ನಲ್ಲಿ ಲಂಚದ ಮೊದಲ ಕಂತು 20 ಲಕ್ಷ ರೂಪಾಯಿ ಸ್ವೀಕರಿಸಿದ ನಂತರ ಇಡಿ ಅಧಿಕಾರಿಯ ಕಾರ್ ಚೇಸ್ ಮಾಡಿ ಬಂಧಿಸಲಾಗಿದೆ.

ಡಿವಿಎಸಿ ಅಧಿಕಾರಿಗಳು ಮಧುರೈನಲ್ಲಿರುವ ಇಡಿ ಉಪವಿಭಾಗೀಯ ಕಚೇರಿ ಮತ್ತು ಬಂಧಿತ ಇಡಿ ಅಧಿಕಾರಿ ಅಂಕಿತ್ ತಿವಾರಿ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ.

2016-ಬ್ಯಾಚ್ ನ ಅಧಿಕಾರಿ ತಿವಾರಿ ಅವರು ಈ ಹಿಂದೆ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮಧುರೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಂಡಿಗಲ್‌ನ ಸರ್ಕಾರಿ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com