ಸುಳ್ಳುಸುದ್ದಿ ಹರಡಿದ ಆರೋಪ: 83 ಲಕ್ಷ ಸಬ್ ಸ್ಕ್ರೈಬರ್ಸ್ ಇರುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿ ಬಿಡುಗಡೆ

ಸುಳ್ಳುಸುದ್ದಿ ಹರಡಿದ ಆರೋಪ ಎದರಿಸುತ್ತಿರುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ನಕಲಿ ಸುದ್ದಿ ಹರಡುತ್ತಿದ್ದ ಯೂಟ್ಯೂಬ್ ಚಾನಲ್ ಗಳ ಪಟ್ಟಿ ಬಿಡುಗಡೆ
ನಕಲಿ ಸುದ್ದಿ ಹರಡುತ್ತಿದ್ದ ಯೂಟ್ಯೂಬ್ ಚಾನಲ್ ಗಳ ಪಟ್ಟಿ ಬಿಡುಗಡೆ

ನವದೆಹಲಿ: ಸುಳ್ಳುಸುದ್ದಿ ಹರಡಿದ ಆರೋಪ ಎದರಿಸುತ್ತಿರುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಪ್ರೆಸ್ ಇನ್‌ಫಾರ್ಮೆಶನ್ ಬ್ಯುರೊದ (PIB) ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ. ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಟ್ವಿಟರ್ ನಲ್ಲಿ ನೀಡಿರುವ ಮಾಹಿತಿ ಅನ್ವಯ Sarkari Yojana Official, Sansani Live, Bajrang Education, Aapke Guruji, BJ News, Ab Bolega Bharat, GVT News, Daily Study, Bharat Ekta News ಎಂಬ 9 ಯುಟ್ಯೂಬ್ ಚಾನಲ್‌ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ದೂರಿದೆ. ಈ ಎಲ್ಲ 9 ಯುಟ್ಯೂಬ್ ಚಾನಲ್‌ಗಳು 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿಸಿದೆ. ಈ ಪೈಕಿ Aapke Guruji and Bajrang Education ಚಾನಲ್ ಗಳು 34 ಲಕ್ಷ ಮತ್ತು 24 ಲಕ್ಷ ಚಂದಾದಾರರನ್ನು ಹೊಂದಿವೆ. 

“PIB ಫ್ಯಾಕ್ ಚೆಕ್ ಯುನಿಟ್ ಬಹಿರಂಗಪಡಿಸಿದ ಯೂಟ್ಯೂಬ್ ಚಾನೆಲ್‌ಗಳು ಭಾರತದ ಮುಖ್ಯ ನ್ಯಾಯಮೂರ್ತಿ, ಭಾರತದ ಪ್ರಧಾನ ಮಂತ್ರಿ ಮತ್ತು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ, ವರದಿಗಳನ್ನು ತಪ್ಪಾಗಿ ನೀಡುತ್ತಿವೆ.

ಕೆಲವು ಚಾನಲ್ ಗಳು ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ, ವಿದ್ಯುನ್ಮಾನ ಮತಯಂತ್ರಗಳ ಮೇಲೆ ನಿಷೇಧ ಹೇರಲಾಗಿದೆ ಮತ್ತು ಮಂತ್ರಿಗಳ ರಾಜೀನಾಮೆ ಅಥವಾ ಮರಣವನ್ನು ತಪ್ಪಾಗಿ ಪ್ರತಿಪಾದಿಸುತ್ತಿವೆ. ನಕಲಿ ಸುದ್ದಿಗಳಲ್ಲಿ `200 ಮತ್ತು `500 ಕರೆನ್ಸಿ ನೋಟುಗಳ ನಿಷೇಧ, ಬ್ಯಾಂಕ್‌ಗಳ ಮುಚ್ಚುವಿಕೆ ಮತ್ತು ಭಾರತ ಸರ್ಕಾರದ ಯೋಜನೆಗಳು ಮತ್ತು ನೀತಿಗಳಿಗೆ ಸಂಬಂಧಿಸಿದ ಸುಳ್ಳು ಮಾಹಿತಿಗಳನ್ನು ಪ್ರಸರಿಸುತ್ತಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಂವೇದನಾಶೀಲ ರಹಿತ ಸುಳ್ಳು ಥಂಬ್‌ನೇಲ್‌ಗಳನ್ನು ಬಳಸುತ್ತಿವೆ. ಯೂಟ್ಯೂಬ್‌ನಲ್ಲಿ ನಕಲಿ ಸುದ್ದಿಗಳ ಹಣಗಳಿಕೆ ಗಂಭೀರ ಕಾಳಜಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಾನಲ್ ಗಳ ನಿಷೇಧ ಸಾಧ್ಯತೆ
ಈ ವರದಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಚಾನಲ್‌ಗಳನ್ನು ಸ್ಥಗಿತಗೊಳಿಸಬಹುದು ಎಂದು ಹೇಳಲಾಗಿದೆ. "ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಮೇಲೆ ಅಸ್ವಸ್ಥತೆಯನ್ನು ಸೃಷ್ಟಿಸುವ ಮತ್ತು ತಪ್ಪು ಮಾಹಿತಿಯನ್ನು ಹರಡುವ ಉದ್ದೇಶದಿಂದ ನಕಲಿ ಮಾಹಿತಿಯನ್ನು ಹರಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಡಿಜಿಟಲ್ ಚಾನೆಲ್‌ಗಳನ್ನು ನಿರ್ಬಂಧಿಸಲು ಸಚಿವಾಲಯವು ನಿರ್ದೇಶನಗಳನ್ನು ನೀಡುತ್ತಿದೆ" ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com