ಕೇಜ್ರಿವಾಲ್ ಗೆ ತೀವ್ರ ಮುಖಭಂಗ: 3 ರಾಜ್ಯಗಳಲ್ಲಿ ಎಎಪಿಯ 215 ಅಭ್ಯರ್ಥಿಗಳಿಗೆ ಸಿಕ್ಕಿದ್ದು ನೋಟಾಗಿಂತ ಕಡಿಮೆ ಮತ!

ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಗೋವಾ, ಗುಜರಾತ್‌ನಂತೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಖಾತೆ ತೆರೆಯುವ ಉದ್ದೇಶ ಈಡೇರಿಲ್ಲ. ಈ ಮೂರು ರಾಜ್ಯಗಳಲ್ಲಿ ಎಎಪಿ ಅಭ್ಯರ್ಥಿಗಳು ಸೋತಿದ್ದು ಹೆಚ್ಚಿನ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಂಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಗೋವಾ, ಗುಜರಾತ್‌ನಂತೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಖಾತೆ ತೆರೆಯುವ ಉದ್ದೇಶ ಈಡೇರಿಲ್ಲ. ಈ ಮೂರು ರಾಜ್ಯಗಳಲ್ಲಿ ಎಎಪಿ ಅಭ್ಯರ್ಥಿಗಳು ಸೋತಿದ್ದು ಹೆಚ್ಚಿನ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಂಡಿದ್ದಾರೆ.

ಮೂರು ರಾಜ್ಯಗಳ 520 ಸ್ಥಾನಗಳ ಪೈಕಿ 215 ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿ ಪಕ್ಷವು ರಾಜಸ್ಥಾನದ 200 ಸ್ಥಾನಗಳ ಪೈಕಿ 88 ಅಭ್ಯರ್ಥಿಗಳನ್ನು, ಮಧ್ಯಪ್ರದೇಶದ 230 ಸ್ಥಾನಗಳಲ್ಲಿ 70 ಅಭ್ಯರ್ಥಿಗಳನ್ನು, ಛತ್ತೀಸ್‌ಗಢದಲ್ಲಿ 90 ಸ್ಥಾನಗಳಲ್ಲಿ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ವಿಶೇಷವೆಂದರೆ ಮೂರೂ ರಾಜ್ಯಗಳಲ್ಲಿ ಎಎಪಿಯ ಮತ ಶೇಕಡಾವಾರು ನೋಟಾಕ್ಕಿಂತ ಕಡಿಮೆ ಇದೆ.

AAP ಪಕ್ಷವು ಛತ್ತೀಸ್‌ಗಢದಲ್ಲಿ 0.94 ಶೇಕಡಾ ಮತಗಳನ್ನು, ಮಧ್ಯಪ್ರದೇಶದಲ್ಲಿ 0.51 ಶೇಕಡಾ ಮತಗಳನ್ನು ಮತ್ತು ರಾಜಸ್ಥಾನದಲ್ಲಿ 0.38 ರಷ್ಟು ಮತಗಳನ್ನು ಪಡೆದಿದೆ. ಛತ್ತೀಸ್‌ಗಢದಲ್ಲಿ ಶೇಕಡಾ 1.27, ಮಧ್ಯಪ್ರದೇಶದಲ್ಲಿ ಶೇಕಡಾ 0.99 ಮತ್ತು ರಾಜಸ್ಥಾನದಲ್ಲಿ ಶೇಕಡಾ 0.96 ಜನರು ನೋಟಾ ಚಲಾವಣೆಯಾಗಿದೆ.

ಆಮ್ ಆದ್ಮಿ ಪಕ್ಷವು ಮೂರೂ ರಾಜ್ಯಗಳಲ್ಲಿ ಸಂಪೂರ್ಣ ಬಲದೊಂದಿಗೆ ಚುನಾವಣೆ ಎದುರಿಸಿತ್ತು. ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಲವಾರು ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ್ದರು. ದೆಹಲಿ ಮತ್ತು ಪಂಜಾಬ್‌ನಂತೆ ಮೂರು ರಾಜ್ಯಗಳಲ್ಲಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com