Mizoram Election Result: ಟುಯಿಚಾಂಗ್ ಕ್ಷೇತ್ರದಲ್ಲಿ ಸೋಲು ಕಂಡ ಉಪಮುಖ್ಯಮಂತ್ರಿ ತೌನ್ಲುಯಾ

ಚುನಾವಣಾ ಆಯೋಗದ ಪ್ರಕಾರ, ಮಿಜೋರಾಂ ಉಪಮುಖ್ಯಮಂತ್ರಿ ಮತ್ತು ಎಂಎನ್ಎಫ್ ಅಭ್ಯರ್ಥಿ ತೌನ್ಲುಯಾ ಅವರಿಗೆ ಝೆಡ್‌ಪಿಎಂ ಅಭ್ಯರ್ಥಿ ವಿರುದ್ಧ ಟುಯಿಟಾಂಗ್ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಟಾಗಿದೆ.
ಮಿಜೋರಾಂ ಡಿಸಿಎಂ ತೌನ್ಲುಯ
ಮಿಜೋರಾಂ ಡಿಸಿಎಂ ತೌನ್ಲುಯ

ಐಜ್ವಾಲ್: ಚುನಾವಣಾ ಆಯೋಗದ ಪ್ರಕಾರ, ಮಿಜೋರಾಂ ಉಪಮುಖ್ಯಮಂತ್ರಿ ಮತ್ತು ಎಂಎನ್ಎಫ್ ಅಭ್ಯರ್ಥಿ ತೌನ್ಲುಯಾ ಅವರಿಗೆ ಝೆಡ್‌ಪಿಎಂ ಅಭ್ಯರ್ಥಿ ವಿರುದ್ಧ ಟುಯಿಟಾಂಗ್ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಟಾಗಿದೆ.

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ನ ತೌನ್ಲುಯಾ ಅವರು 6,079 ಮತಗಳನ್ನು ಪಡೆದರೆ, ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಅಭ್ಯರ್ಥಿ ಡಬ್ಲ್ಯು ಚುವಾನವ್ಮಾ ಅವರು 6,988 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ ಲಾಲ್ಹ್ರಿಯಾತುಯಾ ಅವರು 1,674 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿ ಲಾಲ್‌ಮುನ್ಸಿಯಾಮಿ ಕೇವಲ 67 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಗಿ ಭದ್ರತೆಯ ನಡುವೆ ಸೋಮವಾರ ಬೆಳಗ್ಗೆ 8 ಗಂಟೆಗೆ ಮಿಜೋರಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.

ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಚ್. ಲಿಯಾಂಜೆಲಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com