ಆಂಧ್ರ ಪ್ರದೇಶದ ಬಾಪಟ್ಲಾಗೆ ಅಪ್ಪಳಿಸಿದ ಮಿಚಾಂಗ್ ಚಂಡಮಾರುತ

ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ಬಾಪಟ್ಲಾಗೆ ಮಿಚಾಂಗ್ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಮರಾವತಿ: ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ಬಾಪಟ್ಲಾಗೆ ಮಿಚಾಂಗ್ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಿಚಾಂಗ್ ಚಂಡಮಾರುತ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಉದ್ದಕ್ಕೂ ಮತ್ತು ಅದರ ಆಚೆಗೂ ತೀವ್ರ ಸ್ವರೂಪದ ಬಿರುಗಾಳಿ ಅಪ್ಪಳಿಸಲಿದೆ ಎನ್ನಲಾಗಿದೆ. ಮುಂದಿನ ಎರಡು ಗಂಟೆಗಳಲ್ಲಿ ಮಿಚಾಂಗ್ ದುರ್ಬಲವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಚಂಡಮಾರುತ ಮಿಚಾಂಗ್ ಪ್ರಸ್ತುತ ಬಾಪಟ್ಲಾ ಸಮೀಪ ಇದ್ದು, ಬಾಪಟ್ಲಾ ಮತ್ತು ಕೃಷ್ಣ ಜಿಲ್ಲೆಗಳ ಮೇಲೆ ತೀವ್ರ ಶಕ್ತಿಶಾಲಿ ಬಿರುಗಾಳಿ ಉದ್ಭವಿಸಲಿದೆ. ಇದು ಮಧ್ಯಾಹ್ನ 2 ಗಂಟೆಯ ವೇಳೆಗೆ ಬಾಪಟ್ಲಾ ದಾಟುವ ಸಾಧ್ಯತೆ ಇದೆ" ಎಂದು ಅಮರಾವತಿ ಹವಾಮಾನ ಕೇಂದ್ರದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮಿಚಾಂಗ್ ಚಂಡಮಾರುತ ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ಕ್ರಮೇಣ ಅದು ಗಂಟೆಗೆ 110 ಕಿಮೀ ವೇಗ ಹೆಚ್ಚಿಸಿಕೊಳ್ಳಲಿದೆ ಎಂದು ಅಮರಾವತಿ ಹವಾಮಾನ ಕೇಂದ್ರ ತಿಳಿಸಿದೆ.

ಏತನ್ಮಧ್ಯೆ, ಕೋನಸೀಮಾ, ಕಾಕಿನಾಡ, ಕೃಷ್ಣ, ಬಾಪಟ್ಲಾ ಮತ್ತು ಪ್ರಕಾಶಂ ಏಳು ಜಿಲ್ಲೆಗಳಿಂದ 9,454 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು APSDMA ಪಿಟಿಐಗೆ ತಿಳಿಸಿದೆ.

ತಿರುಪತಿ, ನೆಲ್ಲೂರ್, ಪ್ರಕಾಸಂ, ಬಾಪಟ್ಲಾ, ಕೃಷ್ಣ, ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಂಧ್ರ ಸರ್ಕಾರ ಸೂಚನೆ ನೀಡಿದೆ. ಪುದುಚೆರಿಯಲ್ಲಿ ಸಂಜೆ 6 ಗಂಟೆಯವರೆಗೂ ಕರಾವಳಿ ತೀರಗಳಲ್ಲಿ ಜನರ ಓಡಾಟದ ಮೇಲೆ ನಿರ್ಬಂಧ ವಿಧಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com