ಸಂಸತ್ ಸದಸ್ಯತ್ವ ತ್ಯಜಿಸಲಿರುವ 12 ಬಿಜೆಪಿ ಸಂಸದರು ವಿಧಾನಸಭೆಗೆ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನಗಳಿಂದ ಈ ಬಾರಿ ಅನೇಕ ಬಿಜೆಪಿ ಸಂಸದರು ಸ್ಪರ್ಧಿಸಿ ಗೆದ್ದಿದ್ದಾರೆ. ಈ ಪೈಕಿ 12 ಮಂದಿ ಸಂಸದರು ತಮ್ಮ ಸಂಸತ್ ಸದಸ್ಯತ್ವವನ್ನು ಬಿಟ್ಟು ಕೊಡಲು ಮುಂದಾಗಿದ್ದಾರೆ.
ಬಿಜೆಪಿ
ಬಿಜೆಪಿ

ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನಗಳಿಂದ ಈ ಬಾರಿ ಅನೇಕ ಬಿಜೆಪಿ ಸಂಸದರು ಸ್ಪರ್ಧಿಸಿ ಗೆದ್ದಿದ್ದಾರೆ. ಈ ಪೈಕಿ 12 ಮಂದಿ ಸಂಸದರು ತಮ್ಮ ಸಂಸತ್ ಸದಸ್ಯತ್ವವನ್ನು ಬಿಟ್ಟು ಕೊಡಲು ಮುಂದಾಗಿದ್ದಾರೆ.

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಪ್ರಹ್ಲಾದ್ ಸಿಂಗ್ ಪಟೇಲ್ ಲೋಕಸಭೆಯ ಸದಸ್ಯ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಸಂಸತ್ ಸದಸ್ಯರು, ಕೇಂದ್ರ ಸಚಿವರು ವಿಧಾನಸಭಾ ಸದಸ್ಯತ್ವ ಉಳಿಸಿಕೊಂಡು ಲೋಕಸಭೆಗೆ ರಾಜೀನಾಮೆ ನೀಡುತ್ತಿರುವುದು ಮೂರೂ ರಾಜ್ಯಗಳಲ್ಲಿ ಬಿಜೆಪಿ ಹೊಸ ಮುಖಗಳನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಗಳ ಸುಳಿವು ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ಪಕ್ಷದ ಹಿರಿಯ ನಾಯಕರು ನಿರಾಕರಿಸಿದ್ದಾರೆ. ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೆರಳಿದ ಸಂಸತ್ ನ 10 ಸದಸ್ಯರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಾಥ್ ನೀಡಿದ್ದರು.

ಇನ್ನು ಕೇಂದ್ರ ಸಚಿವರಾದ ರೇಣುಕಾ ಸಿಂಗ್ ಹಾಗೂ ಮಹಾಂತ್ ಬಾಲಕನಾಥ್ ಸಹ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಮಧ್ಯಪ್ರದೇಶದ ರಾಕೇಶ್ ಸಿಂಗ್, ಉದ್ಯಾ ಪ್ರತಾಪ್ ಸಿಂಗ್ ಮತ್ತು ರಿತಿ ಪಾಠಕ್; ರಾಜಸ್ಥಾನದಿಂದ ಕಿರೋಡಿ ಲಾಲ್ ಮೀನಾ, ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಛತ್ತೀಸ್‌ಗಢದಿಂದ ಗೋಮತಿ ಸಾಯಿ ಮತ್ತು ಅರುಣ್ ಸಾವೊ ರಾಜೀನಾಮೆ ನೀಡಿದ ಇತರ ಸಂಸದರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com