ಅಜ್ಮಲ್ ಷರೀಫ್
ದೇಶ
'RIP ಅಜ್ಮಲ್ ಷರೀಫ್'; ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ
ಎರ್ನಾಕುಲಂ ಆಲುವಾದಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷರೀಫ್ ಅವರ ಪುತ್ರ 28 ವರ್ಷದ ಅಜ್ಮಲ್ ಷರೀಫ್ ಅವರು ಕನ್ನಪದವು ಕಟುಪದಂನ ಆಲುವಾ ಯುಸಿ ಕಾಲೇಜು ಬಳಿ ಇರುವ ಅವರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಕೊಚ್ಚಿ: ಎರ್ನಾಕುಲಂ ಆಲುವಾದಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಷರೀಫ್ ಅವರ ಪುತ್ರ 28 ವರ್ಷದ ಅಜ್ಮಲ್ ಷರೀಫ್ ಅವರು ಕನ್ನಪದವು ಕಟುಪದಂನ ಆಲುವಾ ಯುಸಿ ಕಾಲೇಜು ಬಳಿ ಇರುವ ಅವರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಸಾಯುವ ಹತ್ತು ನಿಮಿಷಗಳ ಮೊದಲು, ಅಜ್ಮಲ್ ತನ್ನ ಸಾವನ್ನು ಪ್ರಕಟಿಸಿ Instagram ನಲ್ಲಿ ಪೋಸ್ಟ್ ಮಾಡಿದ್ದಾನೆ. ಶುಕ್ರವಾರ ಸಂಜೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಜ್ಮಲ್‌ನನ್ನು ಕಂಡ ಕುಟುಂಬಸ್ಥರು ಆತನನ್ನು ಅಲುವಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ.
ಅಜ್ಮಲ್ ದುಬೈನಲ್ಲಿದ್ದು, ಅಲ್ಲಿ ಉತ್ತಮ ಕೆಲಸ ಸಿಗದೆ ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿಕರು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ