ತೆಲಂಗಾಣ: ಬಿಆರ್‌ಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕೆಸಿಆರ್ ಆಯ್ಕೆ

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶನಿವಾರ ಬಿಆರ್‌ಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಕೆ. ಚಂದ್ರಶೇಖರ ರಾವ್
ಕೆ. ಚಂದ್ರಶೇಖರ ರಾವ್

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶನಿವಾರ ಬಿಆರ್‌ಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇಂದು ಹೈದರಾಬಾದ್‌ನಲ್ಲಿ ಹೊಸದಾಗಿ ಆಯ್ಕೆಯಾದ ಬಿಆರ್‌ಎಸ್ ಶಾಸಕರ ಸಭೆಯಲ್ಲಿ ಕೆಸಿಆರ್ ಅವರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.

"ವಿಧಾನಸಭೆ ಅಧಿವೇಶನಕ್ಕೆ ಮುಂಚಿತವಾಗಿ ತೆಲಂಗಾಣ ಭವನದಲ್ಲಿ ಬಿಆರ್‌ಎಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಬಿಆರ್ ಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ" ಎಂದು ಬಿಆರ್‌ಎಸ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

ವಿಧಾನಸಭೆಯ ಮಾಜಿ ಸ್ಪೀಕರ್ ಪೋಚಾರಂ ಶ್ರೀನಿವಾಸ್ ರೆಡ್ಡಿ ಅವರು, ಕೆಸಿಆರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಮಾಜಿ ಸಚಿವರಾದ ಟಿ ಶ್ರೀನಿವಾಸ್ ಯಾದವ್ ಮತ್ತು ಕಡಿಯಂ ಶ್ರೀಹರಿ ಅವರು ಪ್ರಸ್ತಾಪವನ್ನು ಬೆಂಬಲಿಸಿದರು ಎಂದು ಬಿಆರ್ ಎಸ್ ಹೇಳಿದೆ.

ಸಭೆಯ ಅಧ್ಯಕ್ಷತೆಯನ್ನು ಬಿಆರ್‌ಎಸ್ ಸಂಸದೀಯ ಪಕ್ಷದ ನಾಯಕ ಕೆ.ಕೇಶವ ರಾವ್ ವಹಿಸಿದ್ದರು.

ಇತ್ತೀಚಿಗೆ ನಡೆಗ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 119 ಸ್ಥಾನಗಳ ಪೈಕಿ ಬಿಆರ್‌ಎಸ್ ಕೇವಲ 39 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 64 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ, ಎಐಎಂಐಎಂ ಮತ್ತು ಸಿಪಿಐ ಕ್ರಮವಾಗಿ ಎಂಟು, ಏಳು ಮತ್ತು ಒಂದು ಸ್ಥಾನ ಗಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com