ಸಾಂದರ್ಭಿಕ ಚಿತ್ರ
ದೇಶ
ಐಸಿಸ್ ಭಯೋತ್ಪಾದನೆ ಸಂಚು ಪ್ರಕರಣ: ಕರ್ನಾಟಕ, ಮಹಾರಾಷ್ಟ್ರಗಳ 40 ಕಡೆ ಎನ್ಐಎ ದಾಳಿ
ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ನವದೆಹಲಿ: ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಇಂದು ಬೆಳಿಗ್ಗೆಯಿಂದ ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು 44 ಸ್ಥಳಗಳ ಪೈಕಿ, ಕರ್ನಾಟಕದ 1 ಸ್ಥಳ, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ