ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಚಿತ್ರ
ದೇಶ
ತಮಿಳುನಾಡು: ಪ್ರವಾಹ ಸಂತ್ರಸ್ತರಿಗೆ 6,000 ರೂ. ಹಣಕಾಸಿನ ನೆರವು ಘೋಷಿಸಿದ ಸಿಎಂ ಸ್ಟಾಲಿನ್
ಮೈಚಾಂಗ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ತಮಿಳುನಾಡು ತತ್ತರಿಸಿದೆ. ರಾಜಧಾನಿ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್ ಮತ್ತಿತರ ಪ್ರದೇಶಗಳು ತೀವ್ರ ಪ್ರವಾಹವನ್ನು ಎದುರಿಸುತ್ತಿದೆ.
ತಮಿಳುನಾಡು: ಮೈಚಾಂಗ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ತಮಿಳುನಾಡು ತತ್ತರಿಸಿದೆ. ರಾಜಧಾನಿ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್ ಮತ್ತಿತರ ಪ್ರದೇಶಗಳು ತೀವ್ರ ಪ್ರವಾಹವನ್ನು ಎದುರಿಸುತ್ತಿದೆ.
ಸದ್ಯ ಮಳೆ ನಿಂತಿದ್ದರೂ ಹಲವು ಪ್ರದೇಶಗಳು ಜಲಾವೃತವಾಗಿದ್ದು, ದೈನಂದಿನ ಜನಜೀವನದ ಮೇಲೆ ಅಪಾರ ಪರಿಣಾಮ ಬೀರಿದ್ದು, ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮಧ್ಯೆ ಪ್ರವಾಹ ಪೀಡಿತ ಸಂತ್ರಸ್ತರಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರೂ. 6,000 ಹಣಕಾಸಿನ ನೆರವು ಘೋಷಿಸಿದ್ದಾರೆ.
ಚಂಡಮಾರುತದಿಂದ ಜೀವನೋಪಾಯಕ್ಕೆ ತೊಂದರೆಯಾದ ಜನರಿಗೆ ಆರ್ಥಿಕ ನೆರವನ್ನು ಪಡಿತರ ಅಂಗಡಿಗಳಲ್ಲಿ ನಗದು ರೂಪದಲ್ಲಿ ಪಾವತಿಸಲಾಗುವುದು ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.ಅಲ್ಲದೆ, ಇತರ ವರ್ಗಗಳ ಅಡಿಯಲ್ಲಿ ಪರಿಹಾರವನ್ನು ಹೆಚ್ಚಿಸಲಾಗುವುದು ಎಂದು ಹೇಳಿದೆ.

