ನಕಲಿ ದಾಖಲೆ ಬಳಸಿ ಎನ್‌ಆರ್‌ಸಿಗೆ ಸೇರ್ಪಡೆಗೊಂಡವರ ಹೆಸರು ಡಿಲೀಟ್ ಮಾಡುತ್ತೇವೆ: ಅಸ್ಸಾಂ ಸಿಎಂ

ನಕಲಿ ದಾಖಲೆಗಳನ್ನು ಬಳಸಿ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ)ಗೆ ಸೇರ್ಪಡೆಗೊಂಡಿರುವ ಅಕ್ರಮ ವಲಸಿಗರ ಹೆಸರನ್ನು ತೆಗೆದು ಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ...
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ನಕಲಿ ದಾಖಲೆಗಳನ್ನು ಬಳಸಿ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ)ಗೆ ಸೇರ್ಪಡೆಗೊಂಡಿರುವ ಅಕ್ರಮ ವಲಸಿಗರ ಹೆಸರನ್ನು ತೆಗೆದು ಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಹೇಳಿದ್ದಾರೆ.

"ನಾವು ನಿಧಾನವಾಗಿ ದೊಡ್ಡ ಯೋಜನೆಯನ್ನು ಸಿದ್ಧಪಡಿಸುತ್ತಿದ್ದೇವೆ. ಫೋರ್ಜರಿ ಮೂಲಕ ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡವರ ಹೆಸರನ್ನು ಡಿಲೀಟ್ ಮಾಡಲು ಪ್ರಯತ್ನಿಸುತ್ತೇವೆ" ಎಂದು ಶರ್ಮಾ ಪತ್ರಕರ್ತರಿಗೆ ತಿಳಿಸಿದ್ದಾರೆ.

3.3 ಕೋಟಿ ಅರ್ಜಿದಾರರಲ್ಲಿ 19.06 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಆಗಸ್ಟ್ 2019 ರಲ್ಲಿ ಪ್ರಕಟಿಸಲಾದ ಎನ್‌ಆರ್‌ಸಿಯ ಪೂರ್ಣ ಪಟ್ಟಿಯಿಂದ ಹೊರಗುಳಿದಿದ್ದಾರೆ. ಎನ್‌ಆರ್‌ಸಿ ಅಪ್‌ಡೇಟ್ ಮಾಡುವ ಸಮಯದಲ್ಲಿ, ಅಧಿಕಾರಿಗಳು ಜನನ ಪ್ರಮಾಣಪತ್ರ, ನಿರಾಶ್ರಿತರ ನೋಂದಣಿ ಪ್ರಮಾಣಪತ್ರ, ಭೂಮಿ ಮತ್ತು ಹಿಡುವಳಿ ದಾಖಲೆಗಳು, ಪೌರತ್ವ ಪ್ರಮಾಣಪತ್ರ ಮತ್ತು ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ನನಗೆ ವೈಯಕ್ತಿಕವಾಗಿ 1951 ರಿಂದ ಅಸ್ಸಾಂನಲ್ಲಿ ವಾಸಿಸುವ ವಲಸಿಗರನ್ನು ಎನ್‌ಆರ್‌ಸಿಗೆ ಸೇರಿಸಲು ಬಯಸಿದ್ದೆ. ಆದರೆ 1971 ರ ಕಟ್-ಆಫ್ ವರ್ಷವನ್ನು ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಒಪ್ಪಿಕೊಳ್ಳಲಾಗಿದೆ ಎಂದು ಅಸ್ಸಾಂ ಸಿಎಂ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com