ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಯುಗ ಅಂತ್ಯ: ಸಿಎಂ ಸ್ಥಾನಕ್ಕೆ ರಾಜೀನಾಮೆ

ಮಧ್ಯ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮೋಹನ್ ಯಾದವ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ರಾಜಭವನಕ್ಕೆ ಭೇಟಿ ನೀಡಿದ ಚೌಹಾಣ್, ರಾಜ್ಯಪಾಲ ಮಂಗೂಭಾಯಿ ಪಟೇಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. 
ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಿವರಾಜ್ ಸಿಂಗ್ ಚೌಹಾಣ್
ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಮಧ್ಯ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮೋಹನ್ ಯಾದವ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ರಾಜಭವನಕ್ಕೆ ಭೇಟಿ ನೀಡಿದ ಚೌಹಾಣ್, ರಾಜ್ಯಪಾಲ ಮಂಗೂಭಾಯಿ ಪಟೇಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. 

ಒಬಿಸಿ ನಾಯಕ ಮತ್ತು ಮೂರು ಬಾರಿ ಶಾಸಕರಾಗಿರುವ ಮೋಹನ್ ಯಾದವ್ (58) ಅವರನ್ನು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಹೇಳಿದರು. ಹೊಸದಾಗಿ ಚುನಾಯಿತರಾದ ಶಾಸಕರ ಸಭೆ ಮುಗಿದ ತಕ್ಷಣವೇ ರಾಜಭವನ ತಲುಪಿ ರಾಜೀನಾಮೆ ಸಲ್ಲಿಸಿದರು. ಈ ಮೂಲಕ ಮಧ್ಯಪ್ರದೇಶದಲ್ಲಿ ಮೂರು ಬಾರಿ ಸಿಎಂ ಆಗಿ ಆಡಳಿತ ನಡೆಸಿದ್ದ ಚೌಹಾಣ್ ಅವರ ಯುಗ ಅಂತ್ಯವಾಯಿತು. 

ಮಧ್ಯಪ್ರದೇಶ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೂ ಚೌಹಾಣ್ ಅವರ ಭವಿಷ್ಯದ ಸುತ್ತ ಮಾತುಗಳು ಕೇಳಿಬರುತ್ತಲೇ ಇತ್ತು. ಫಲಿತಾಂಶ ಪ್ರಕಟವಾಗಿ 9 ದಿನ ಕಳೆದರೂ ಮುಖ್ಯಮಂತ್ರಿ ಆಯ್ಕೆ ಮಾಡಿರಲಿಲ್ಲ. ಕೊನೆಗೆ ಕೇಂದ್ರ ವೀಕ್ಷಕರು ಈ ವಿಷಯದ ಕುರಿತು ಸಭೆ  ನಡೆಸುವ ಮೂಲಕ ಸಸ್ಪೆನ್ಸ್ ನ್ನು ಹಾಗೆಯೇ ಮುಂದುವರೆಸಿದರು. ಈ ಮಧ್ಯೆ ಶಿವರಾಜ್ ಸಿಂಗ್ ಚೌಹಾಣ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿದ 'ರಾಮ್ ರಾಮ್' ಟ್ವೀಟ್ ಕೂಡಾ ವಿದಾಯದ ಫೋಸ್ಟ್ ಕೂಡಾ ವಿದಾಯದ ಫೋಸ್ಟ್ ರೀತಿಯ ಅನುಮಾನ ಮೂಡಿಸಿತ್ತು.  

ಈ ಹಿಂದೆ ಅಥವಾ ಈಗಲೂ ಮುಖ್ಯಮಂತ್ರಿ ಹುದ್ದೆಗೆ ತಾನು ಎಂದಿಗೂ ಸ್ಪರ್ಧಿಯಾಗಿರಲಿಲ್ಲ ಎಂದು ಚೌಹಾಣ್ ಈ ಹಿಂದೆ ಸ್ಪಷ್ಟಪಡಿಸಿದ್ದರು. ಪಕ್ಷದ ಕಾರ್ಯಕರ್ತನಾಗಿ ಬಿಜೆಪಿ ನೀಡಿದ ಯಾವುದೇ ಕೆಲಸವನ್ನು ಸಮರ್ಪಣಾ ಭಾವದಿಂದ ನನ್ನ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ ಎಂದು ಎಕ್ಸ್ ನಲ್ಲಿ ವಿಡಿಯೋ ಸಂದೇಶದಲ್ಲಿ ಹೇಳಿದ್ದರು. ಈಗ ಮೋಹನ್ ಯಾದವ್  ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದರೊಂದಿಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದಿದ್ದು, ಶಿವರಾಜ್ ಸಿಂಗ್ ಚೌಹಾಣ್ ಯುಗ ಅಂತ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com