ಬಯಸದೆ ಬಂದ 'ಲಾಟರಿ' ಭಾಗ್ಯ: ಐಷಾರಾಮಿ ರೇಂಜ್ ರೋವರ್ ಕಾರಿನ ಮಾಲೀಕನಾದ ಟ್ರ್ಯಾಕ್ಟರ್ ಚಾಲಕ!

ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹಟಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಅಸ್ಸಾಂ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ.

ಟ್ರ್ಯಾಕ್ಟರ್ ಚಾಲಕ ಇಂಜಮಾಮುಲ್ ಹಕ್ ಅಸ್ಸಾಂ ರಾಫೆಲ್ ಡ್ರಾದಲ್ಲಿ ಜಾಕ್‌ಪಾಟ್ ಹೊಡೆದಿದ್ದು 76 ಲಕ್ಷ ಮೌಲ್ಯದ ಐಷಾರಾಮಿ ರೇಂಜ್ ರೋವರ್ ಕಾರು ಗೆದ್ದಿದ್ದಾರೆ. ಇಂಜಮಾಮ್ ಅವರ ಸೋದರ ಮಾವ ಸೈಫುಲ್ ಇಸ್ಲಾಂ ಕೂಡ ಅದೃಷ್ಟಶಾಲಿಯಾಗಿದ್ದಾರೆ. ಅವರು 16 ನೇ ಬಹುಮಾನ, ವ್ಯಾಗನ್ಆರ್ ಕಾರು ಗೆದ್ದರು. ಹಕ್ ಉತ್ತರ ಕಲ್ಜಾರ್ ಗ್ರಾಮದವರಾಗಿದ್ದು, ಇಸ್ಲಾಂ ಕೆಳ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಸಿತೋಲಿ ಗ್ರಾಮದವರಾಗಿದ್ದಾರೆ.

ಒಂದಕ್ಕೆ 100 ರೂಪಾಯಿಯಂತೆ ಇಬ್ಬರೂ ತಲಾ ಎರಡು ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದರು. ಹೌಲಿ ರಾಸ್ ಉತ್ಸವ ಆಚರಣೆ ಸಮಿತಿಯು ಆಯೋಜಿಸಿದ್ದ ರಾಫೆಲ್ ಡ್ರಾ ಫಲಿತಾಂಶವನ್ನು ಭಾನುವಾರ ಪ್ರಕಟಿಸಲಾಯಿತು. ಜಾಕ್‌ಪಾಟ್ ಹೊಡೆದ ವಿಷಯ ತಿಳಿದಾಗ ಹಕ್‌ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ನನ್ನ ಸ್ನೇಹಿತರೊಬ್ಬರು ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹಂಚಿಕೊಂಡಾಗ ನಾನು ಮನೆಯಲ್ಲಿದ್ದೆ. ನಾನು ಮೊದಲ ಬಹುಮಾನವನ್ನು ಗೆದ್ದಿದ್ದೇನೆ ಎಂದು ತಿಳಿದಾಗ ನನಗೆ ಎಷ್ಟು ಸಂತೋಷವಾಯಿತು ಎಂದು ಹೇಳಲು ಸಾಧ್ಯವಿಲ್ಲ ಎಂದು ಹಕ್ ಪತ್ರಕರ್ತರಿಗೆ ತಿಳಿಸಿದರು.

ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ, ನಾನು ಬಹುಮಾನವನ್ನು ಗೆಲ್ಲುತ್ತೇನೆ ಎಂದು ನಂಬಿದ್ದೆ. ನಾನು ಬಡ ಟ್ರ್ಯಾಕ್ಟರ್ ಚಾಲಕ, ನಾನು ಒಂದು  ಗೆದ್ದರೆ, ಅದು ನನ್ನ ಅದೃಷ್ಟವನ್ನು ಬದಲಾಯಿಸಬಹುದು ಎಂದು ನಾನು ಭಾವಿಸಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com