ಗೋವಾ ವಿಮಾನ ನಿಲ್ದಾಣದಲ್ಲಿ ಹಿಂದಿ ಗೊತ್ತಿಲ್ಲದ ತಮಿಳು ಮಹಿಳೆಗೆ ಅವಮಾನ: ಸಿಎಂ ಸ್ಟಾಲಿನ್ ಖಂಡನೆ

ಹಿಂದಿ ಗೊತ್ತಿಲ್ಲದ ತಮಿಳು ಮಹಿಳೆಯೊಬ್ಬರಿಗೆ ಗೋವಾ ವಿಮಾನ ನಿಲ್ದಾಣದಲ್ಲಿ ಅವಮಾನ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಆರೋಪಿಸಿದ್ದಾರೆ.
ಸಿಎಂ ಎಂಕೆ ಸ್ಟಾಲಿನ್
ಸಿಎಂ ಎಂಕೆ ಸ್ಟಾಲಿನ್

ಚೆನ್ನೈ: ಹಿಂದಿ ಗೊತ್ತಿಲ್ಲದ ತಮಿಳು ಮಹಿಳೆಯೊಬ್ಬರಿಗೆ ಗೋವಾ ವಿಮಾನ ನಿಲ್ದಾಣದಲ್ಲಿ ಅವಮಾನ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಆರೋಪಿಸಿದ್ದಾರೆ.

ಹಿಂದಿ ಮಾತನಾಡಲು ಬರಲ್ಲ ಎಂದು ತಿಳಿದ ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಾನ್ ಸ್ಟೇಬಲ್ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಹಿಂದಿಯಲ್ಲಿ ಮಾತನಾಡುವಂತೆ ಪೊಲೀಸ್ ಹೇಳಿದಾಗ ಆ ಭಾಷೆ ನನಗೆ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. ನಂತರ ಇದೇ ವಿಚಾರದಲ್ಲಿ ಆಕೆಗೆ ಬೆದರಿಕೆಯೊಡ್ಡಲಾಗಿದೆ ಎಂದು ಎಂದು ಅವರು ದೂರಿದ್ದಾರೆ. 

ಈ ಘಟನೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ತಮಿಳುನಾಡು ಭಾರತದಲ್ಲಿದ್ದು, ದೇಶದ ಎಲ್ಲಾ ಜನರು ಹಿಂದಿ ಕಲಿಯಬೇಕು ಎಂದು ಸಿಐಎಸ್ಎಫ್ ವ್ಯಕ್ತಿ ಉಪನ್ಯಾಸ ನೀಡಿದ್ದಾರೆ. ಇದು ತೀವ್ರ ಖಂಡನೀಯ ಎಂದಿದ್ದಾರೆ. 

ಹಿಂದಿಯನ್ನು ಸಂವಿಧಾನದಲ್ಲಿ ಅಧಿಕೃತ ಭಾಷೆಯಾಗಿ ಗೊತ್ತುಪಡಿಸಲಾಗಿದೆಯೇ ಹೊರತು ರಾಷ್ಟ್ರ ಭಾಷೆಯಾಗಿಲ್ಲ ಎಂದು ಸಿಐಎಸ್‌ಎಫ್‌ಗೆ ಯಾರು ಹೇಳುವುದು ಎಂಬುದು ಆಶ್ಚರ್ಯವಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com