ರಾಜ್ಯಸಭೆಯಲ್ಲಿ ಎಎಪಿ ಪಕ್ಷದ ನಾಯಕನಾಗಿ ರಾಘವ್ ಚಡ್ಡಾ ನೇಮಕ

ಆಮ್ ಆದ್ಮಿ ಪಕ್ಷವು ಸಂಜಯ್ ಸಿಂಗ್ ಬದಲಿಗೆ ತನ್ನ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕನ್ನಾಗಿ ನೇಮಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಘವ್ ಚಡ್ಡಾ
ರಾಘವ್ ಚಡ್ಡಾ

ನವದೆಹಲಿ: ಆಮ್ ಆದ್ಮಿ ಪಕ್ಷವು ಸಂಜಯ್ ಸಿಂಗ್ ಬದಲಿಗೆ ತನ್ನ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕನ್ನಾಗಿ ನೇಮಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ರಾಜ್ಯಸಭಾ ಅಧ್ಯಕ್ಷರಿಗೆ ಎಎಪಿ ಮುಖ್ಯಸ್ಥರು ಪತ್ರ ಬರೆದಿದ್ದು, ಆರೋಗ್ಯ ಸಮಸ್ಯೆ ಹೊಂದಿರುವ ಸಂಜಯ್ ಸಿಂಗ್ ಅನುಪಸ್ಥಿತಿಯಲ್ಲಿ ರಾಘವ್ ಚಡ್ಡಾ ಇನ್ನು ಮುಂದೆ ಮೇಲ್ಮನೆಯಲ್ಲಿ ಪಕ್ಷದ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ.

ಎಎಪಿ ಸಂಸದ ಸಂಜಯ್ ಸಿಂಗ್ ಸದ್ಯ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಚಡ್ಡಾ ಅವರನ್ನು ನಾಯಕನ್ನಾಗಿ ನೇಮಿಸುವ ಕುರಿತು ಎಎಪಿಯಿಂದ ಪತ್ರವನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಚಡ್ಡಾ ರಾಜ್ಯಸಭೆಯ ಕಿರಿಯ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ಮೇಲ್ಮನೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ಎಎಪಿ ರಾಜ್ಯಸಭೆಯಲ್ಲಿ ನಾಲ್ಕನೇ ದೊಡ್ಡ ಬಲವನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com