ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಭಾನುವಾರ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುವ ವೇಳೆ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ತನ್ನ ಬೆಂಗಾವಲು ಪಡೆಯನ್ನು ತಡೆದಿದ್ದಾರೆ. ಪ್ರಧಾನಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ಜನರು ನಿಂತಿದ್ದು, ಆಂಬುಲೆನ್ಸ್ ಬೆಂಗಾವಲು ಪಡೆಯನ್ನು ಹಿಂದಿಕ್ಕುತ್ತಿರುವುದು ವೀಡಿಯೊದಲ್ಲಿದೆ.
ಪ್ರಧಾನಿ ಮೋದಿ ತಮ್ಮ ಎರಡು ದಿನಗಳ ಭೇಟಿಯಲ್ಲಿ ವಾರಣಾಸಿ ಮತ್ತು ಪೂರ್ವಂಚಲದಲ್ಲಿ ರೂ.19,000 ಕೋಟಿಗೂ ಹೆಚ್ಚು ಮೊತ್ತದ 37 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಅವರು ನಮೋ ಘಾಟ್‌ನಿಂದ ಕಾಶಿ ತಮಿಳು ಸಂಗಮಂ 2.0 ನ್ನು ಪ್ರಾರಂಭಿಸುತ್ತಾರೆ ಮತ್ತು ಕನ್ಯಾಕುಮಾರಿಯಿಂದ ವಾರಣಾಸಿಗೆ ಹೊಸ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
Advertisement