ನವದೆಹಲಿ: 1.38 ಲಕ್ಷ ರೂ. ನೀಡಿ ಕಾಂಗ್ರೆಸ್ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಚಾಲನೆ

ಕಾಂಗ್ರೆಸ್ ಪಕ್ಷದ ದೇಶಕ್ಕಾಗಿ ದೇಣಿಗೆ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೂ. 1.38 ಲಕ್ಷ ದೇಣಿಗೆ ನೀಡುವ ಮೂಲಕ ಸೋಮವಾರ ಇಲ್ಲಿ ಚಾಲನೆ ನೀಡಿದರು.ಉತ್ತಮ ಭಾರತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಬೆಂಬಲಿಗರು ಹಣವನ್ನು ದೇಣಿಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.  
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು
Updated on

ನವದೆಹಲಿ: ಕಾಂಗ್ರೆಸ್ ಪಕ್ಷದ ದೇಶಕ್ಕಾಗಿ ದೇಣಿಗೆ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೂ. 1.38 ಲಕ್ಷ ದೇಣಿಗೆ ನೀಡುವ ಮೂಲಕ ಸೋಮವಾರ ಇಲ್ಲಿ ಚಾಲನೆ ನೀಡಿದರು.ಉತ್ತಮ ಭಾರತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಬೆಂಬಲಿಗರು ಹಣವನ್ನು ದೇಣಿಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.  

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀವು ಕೇವಲ ಶ್ರೀಮಂತರಿಂದ ಹಣವನ್ನು ಸಂಗ್ರಹಿಸುತ್ತಿದ್ದರೆ, ಅವರ ಇಚ್ಛೆಗೆ ಅನುಗುಣವಾಗಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಮಾಡಬೇಕಾಗುತ್ತದೆ. ನಮ್ಮ ಪಕ್ಷವು ಯಾವಾಗಲೂ ಹಿಂದುಳಿದವರು, ದಲಿತರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಮೇಲ್ವರ್ಗದವರೊಂದಿಗೆ ಇರುತ್ತದೆ. ನಾವು ಅವರಿಗೆ ಸಹಾಯ ಮಾಡಲು ಬಯಸುತ್ತೇವೆ. ಇದು ಸಾಮಾನ್ಯ ಜನರ ನೆರವಿನಿಂದ ದೇಶ ಕಟ್ಟುವ ಉಪಕ್ರಮವಾಗಿದೆ ಎಂದರು.

"ಇದು ಅಭಿಯಾನಕ್ಕಿಂತ ಹೆಚ್ಚಿನದು. ಇದು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯುವ ಬದ್ಧತೆಯಾಗಿದೆ, ಅಸಮಾನತೆಗಳನ್ನು ನಿವಾರಿಸಲು ಮತ್ತು ಶ್ರೀಮಂತರಿಗೆ ಒಲವು ತೋರುವ ಸರ್ಕಾರದ ವಿರುದ್ಧ ತೋರುವ ವಿರೋಧವಾಗಿದೆ. ನಾವು ಹೆಚ್ಚಿನ ನಿರುದ್ಯೋಗ ಮತ್ತು  ವೆಚ್ಚಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಹೇಳಿದರು. 

ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಹಣದ ಅಗತ್ಯವಿದೆ. ಅಸಹಕಾರ ಆಂದೋಲನಕ್ಕೆ ನಿಧಿ ಸಂಗ್ರಹಿಸಲು ಮಹಾತ್ಮ ಗಾಂಧಿಯವರ ‘ತಿಲಕ್ ಸ್ವರಾಜ್ ನಿಧಿ’ಯಿಂದ ಈ ಕಾರ್ಯಕ್ರಮ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಡಿಸೆಂಬರ್ 28ಕ್ಕೆ ಕಾಂಗ್ರೆಸ್ ಪಕ್ಷಕ್ಕೆ 138 ವರ್ಷ ತುಂಬಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರು ರೂ. 138, 1,380 ಮತ್ತು 13, 800 ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡಿ ಜನರಲ್ಲಿ ವಿನಂತಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com