ಕಾಂಗ್ರೆಸ್ ನಿಂದ 'ದೇಶಕ್ಕಾಗಿ ದೇಣಿಗೆ' ಕ್ರೌಡ್‌ಫಂಡಿಂಗ್ ಅಭಿಯಾನ

2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ಸಂಪನ್ಮೂಲ ಕ್ರೂಡಿಕರಿಸಲು  ಕಾಂಗ್ರೆಸ್ ದೇಶಾದ್ಯಂತ 'ದೇಶಕ್ಕಾಗಿ ದೇಣಿಗೆ' ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಡಿಸೆಂಬರ್ 18 ರಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ಸಂಪನ್ಮೂಲ ಕ್ರೂಡಿಕರಿಸಲು  ಕಾಂಗ್ರೆಸ್ ದೇಶಾದ್ಯಂತ 'ದೇಶಕ್ಕಾಗಿ ದೇಣಿಗೆ' ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಡಿಸೆಂಬರ್ 18 ರಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಈ ಕುರಿತು ಎಐಸಿಸಿ ಪ್ರಧಾನ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್,  18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಕನಿಷ್ಠ 138 ರೂ. ಅಥವಾ 1,380 ರೂ.  13,800 ಮತ್ತು ಹೀಗೆ ದೇಣಿಗೆ ನೀಡಬಹುದು ಎಂದರು. 

1920-21ರಲ್ಲಿ ನೂರು ವರ್ಷಗಳ ಹಿಂದೆ ಪ್ರಾರಂಭವಾದ ಮಹಾತ್ಮ ಗಾಂಧಿಯವರ ಐತಿಹಾಸಿಕ 'ತಿಲಕ್ ಸ್ವರಾಜ್ ನಿಧಿ'ಯಿಂದ ಈ ಕಾರ್ಯಕ್ರಮ ಪ್ರೇರಿತವಾಗಿದೆ. ಸಮಾನ ಸಂಪನ್ಮೂಲ ಹಂಚಿಕೆ ಮತ್ತು ಅವಕಾಶಗಳಿಂದ ಸಮೃದ್ಧವಾಗಿರುವ ಭಾರತವನ್ನು ರಚಿಸುವಲ್ಲಿ ಪಕ್ಷವನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು  ಹೊಂದಿದೆ ಎಂದು ಅವರು ಹೇಳಿದರು.

ಕ್ರೌಡ್‌ಫಂಡಿಂಗ್ ಅಭಿಯಾನಕ್ಕಾಗಿ ಪಕ್ಷವು ಎರಡು ಆನ್‌ಲೈನ್ ಚಾನಲ್‌ಗಳನ್ನು ರಚಿಸಿದ್ದು,  donateinc.in ಪೋರ್ಟಲ್ ಮತ್ತು ಕಾಂಗ್ರೆಸ್ ಅಧಿಕೃತ ವೆಬ್ ಸೈಟ್  inc.in ನಲ್ಲಿ ದೇಣಿಗೆ ನೀಡಬಹುದು. ಡಿಸೆಂಬರ್ 18 ರಂದು ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಅವರು ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಮತ್ತು ಅದೇ ಸಮಯದಲ್ಲಿ ದೇಣಿಗೆ ಲಿಂಕ್ ಲೈವ್ ಆಗಲಿದೆ ಎಂದು ವೇಣುಗೋಪಾಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com