ವಿಧಾನಸಭೆ ಸದಸ್ಯತ್ವಕ್ಕೆ ಗುಜರಾತ್ ಕಾಂಗ್ರೆಸ್ ಶಾಸಕ ಚಿರಾಗ್ ಪಟೇಲ್ ರಾಜೀನಾಮೆ; ಪಕ್ಷದ ವಿರುದ್ಧ ವಾಗ್ದಾಳಿ

ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ನಾಯಕತ್ವದ ಕಾರ್ಯಶೈಲಿಯಿಂದ ಬೇಸರಗೊಂಡು ಪಕ್ಷದ ಶಾಸಕ ಚಿರಾಗ್ ಪಟೇಲ್ ಅವರು ಮಂಗಳವಾರ ವಿಧಾನಸಭಾ ಸದಸ್ಯತ್ವಕ್ಕೆ....
ಚಿರಾಗ್ ಪಟೇಲ್ ರಾಜೀನಾಮೆ
ಚಿರಾಗ್ ಪಟೇಲ್ ರಾಜೀನಾಮೆ

ಅಹಮದಾಬಾದ್: ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ನಾಯಕತ್ವದ ಕಾರ್ಯಶೈಲಿಯಿಂದ ಬೇಸರಗೊಂಡು ಪಕ್ಷದ ಶಾಸಕ ಚಿರಾಗ್ ಪಟೇಲ್ ಅವರು ಮಂಗಳವಾರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪಕ್ಷದ ರಾಜ್ಯ ಘಟಕದಲ್ಲಿ ಗುಂಪುಗಾರಿಕೆ ಇದೆ ಎಂದು ಆರೋಪಿಸಿದ ಪಟೇಲ್, ಹವಾನಿಯಂತ್ರಿತ ಬಂಗಲೆಗಳಲ್ಲಿ ದೆಹಲಿಯಿಂದ ನೇರವಾಗಿ ಕೇಂದ್ರ ನಾಯಕತ್ವ ರಾಜ್ಯ ಘಟಕವನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ಇತರ ಹಲವು ಶಾಸಕರು ಕೂಡ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನಗೊಂಡಿದ್ದು, ಉಸಿರುಗಟ್ಟುವ ವಾತಾವರಣದಲ್ಲಿದ್ದಾರೆ ಎಂದು ಚಿರಾಗ್ ಪಟೇಲ್ ಆರೋಪಿಸಿದ್ದಾರೆ.

ಆನಂದ್ ಜಿಲ್ಲೆಯ ಖಂಭತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಚಿರಾಗ್ ಪಟೇಲ್ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಚಿರಾಗ್ ಪಟೇಲ್ ಅವರು ಇಂದು ಬೆಳಗ್ಗೆ ಗಾಂಧಿನಗರದಲ್ಲಿ ಗುಜರಾತ್ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಸ್ಪೀಕರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 
ಚಿರಾಗ್ ಪಟೇಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪೀಕರ್ ಚೌಧರಿ ಅವರು ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com