ಜ್ಞಾನವಾಪಿ ಮಸೀದಿ ಪ್ರಕರಣ: ಹಿಂದೂ ಪರ ಅರ್ಜಿ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್‌ ಅಸ್ತು, ಮುಸ್ಲಿಮರ 5 ಅರ್ಜಿ ವಜಾ

ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Masjid) ಇರುವ ಜಾಗದಲ್ಲಿ ಹಿಂದೂ ಪೂಜಾಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್ (Allahabad High court) ಅಸ್ತು ಎಂದಿದ್ದು, ಈ ಅರ್ಜಿಯ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮುಸ್ಲಿಮರ ಐದು ಅರ್ಜಿಗಳನ್ನು ವಜಾ ಮಾಡಿದೆ.
ಜ್ಞಾನವಾಪಿ ಮಸೀದಿ  (ಸಂಗ್ರಹ ಚಿತ್ರ)
ಜ್ಞಾನವಾಪಿ ಮಸೀದಿ (ಸಂಗ್ರಹ ಚಿತ್ರ)
Updated on

ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Masjid) ಇರುವ ಜಾಗದಲ್ಲಿ ಹಿಂದೂ ಪೂಜಾಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್ (Allahabad High court) ಅಸ್ತು ಎಂದಿದ್ದು, ಈ ಅರ್ಜಿಯ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮುಸ್ಲಿಮರ ಐದು ಅರ್ಜಿಗಳನ್ನು ವಜಾ ಮಾಡಿದೆ.

ಜ್ಞಾನವಾಪಿ ಮಸೀದಿ (Gyanvapi Mosque) ಇರುವ ಸ್ಥಳದಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸುವ ಕುರಿತು ವಾರಾಣಸಿ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿದ್ದ ಎಲ್ಲಾ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಈ ತೀರ್ಪಿನೊಂದಿಗೆ ನ್ಯಾಯಾಲಯವು 1991ರ ಪ್ರಕರಣದ ವಿಚಾರಣೆಯನ್ನು ಅಂಗೀಕರಿಸಿದ್ದು, ಪ್ರಕರಣದ ವಿಚಾರಣೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಲು ವಾರಣಾಸಿ ನ್ಯಾಯಾಲಯಕ್ಕೆ ಆದೇಶಿಸಿತು.

ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸಲು ವಾರಣಾಸಿ ನ್ಯಾಯಾಲಯ ಏಪ್ರಿಲ್ 8, 2021ರಂದು ನೀಡಿದ ಆದೇಶವನ್ನು ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ (AIMC) ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ ಅರ್ಜಿಗಳು ವಿರೋಧಿಸಿದ್ದವು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿಂದೂ ಪರ ವಕೀಲ ಹರಿಶಂಕರ್ ಜೈನ್, 'ಇದು ಅಲಹಾಬಾದ್ ಹೈಕೋರ್ಟ್‌ನ ಈ ಕುರಿತ ಎರಡನೇ ತೀರ್ಪು. ಈ ತೀರ್ಪು ಸರಿಯಾಗಿದೆ. ಈ ಸನ್ನಿವೇಶದಲ್ಲಿ ಪೂಜಾ ಸ್ಥಳದ ಕಾಯ್ದೆ ಅನ್ವಯವಾಗುವುದಿಲ್ಲ. ಒಂದು ಸ್ಥಳವು ಧಾರ್ಮಿಕ ರಚನೆಯೇ ಅಥವಾ ಅಲ್ಲವೇ ಎಂಬುದನ್ನು ಪುರಾವೆಗಳೊಂದಿಗೆ ಮಾತ್ರ ಸಾಬೀತುಪಡಿಸಬಹುದು' ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಹಿಂದೂ ಪರವಾದ ಫಿರ್ಯಾದಿ ಪ್ರಕಾರ, ಜ್ಞಾನವಾಪಿ ಮಸೀದಿಯು ದೇವಾಲಯದ ಒಂದು ಭಾಗವಾಗಿದೆ. ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನ ಪ್ರಾಥಮಿಕ ವಾದವೆಂದರೆ, 1991ರ ಪೂಜಾ ಸ್ಥಳಗಳ ಕಾಯಿದೆ (ವಿಶೇಷ ನಿಬಂಧನೆಗಳು) ಪ್ರಕಾರ ಈ ಮೊಕದ್ದಮೆಯನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು. ಈ ಕಾಯಿದೆ 1947ರ ಆಗಸ್ಟ್ 15ರಂದು ಧಾರ್ಮಿಕ ಸ್ಥಳಗಳು ಹೇಗಿದ್ದವೋ ಆ ಸ್ವರೂಪವನ್ನು ಬದಲಾಯಿಸುವುದನ್ನು ನಿರ್ಬಂಧಿಸುತ್ತದೆ.

ಡಿಸೆಂಬರ್ 8ರಂದು, ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಅರ್ಜಿದಾರರ ಮತ್ತು ಪ್ರತಿವಾದಿಗಳ ವಕೀಲರ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದ್ದರು. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ AIMC, ವಾರಣಾಸಿ ನ್ಯಾಯಾಲಯದ ಮುಂದೆ ತಂದ ಮೊಕದ್ದಮೆಯ ಸಿಂಧುತ್ವವನ್ನು ಪ್ರಶ್ನಿಸುತ್ತದೆ.

ಈ ಮೊಕದ್ದಮೆಯಲ್ಲಿ, ಹಿಂದೂ ಅರ್ಜಿದಾರರು ಪ್ರಸ್ತುತ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com