ಜಿಎಸ್‌ಟಿ ಎರಡನೇ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ

ಜಿಎಸ್‌ಟಿ ಮೇಲ್ಮನವಿ ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರ ವಯೋಮಿತಿಯನ್ನು ಹೆಚ್ಚಿಸುವ ಜಿಎಸ್‌ಟಿ ಎರಡನೇ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಜಿಎಸ್‌ಟಿ ಮೇಲ್ಮನವಿ ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರ ವಯೋಮಿತಿಯನ್ನು ಹೆಚ್ಚಿಸುವ ಜಿಎಸ್‌ಟಿ ಎರಡನೇ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿವಿಧ ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ಗಳಲ್ಲಿ ಜಿಎಸ್‌ಟಿ ಬೇಡಿಕೆಗಳ ವಿರುದ್ಧ ದಾವೆ ಹೂಡುತ್ತಿರುವ ತೆರಿಗೆದಾರರು ತಮ್ಮ ಪ್ರಕರಣಗಳನ್ನು ಹಿಂಪಡೆದು, ಜಿಎಸ್‌ಟಿ ಮೇಲ್ಮನವಿ ನ್ಯಾಯಾಧಿಕರಣ ಸಂಪರ್ಕಿಸಲು ಸ್ವತಂತ್ರ್ಯರಾಗಿರುತ್ತಾರೆ ಎಂದು ಹೇಳಿದರು.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಎರಡನೇ ತಿದ್ದುಪಡಿ) ಮಸೂದೆ 2023 ಅನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಮಸೂದೆಯು ಜಿಎಸ್‌ಟಿ ಮೇಲ್ಮನವಿ ನ್ಯಾಯಾಧಿಕರಣ(ಜಿಎಸ್‌ಟಿಎಟಿ)ದ ಅಧ್ಯಕ್ಷರು ಮತ್ತು ಸದಸ್ಯರ ವಯಸ್ಸಿನ ಮಿತಿಯನ್ನು ಕ್ರಮವಾಗಿ 70 ವರ್ಷ ಮತ್ತು 67 ವರ್ಷಗಳಿಗೆ ಹೆಚ್ಚಿಸಲು ಅವಕಾಶ ನೀಡುತ್ತದೆ. ಈ ಹಿಂದೆ ಅಧ್ಯಕ್ಷರಿಗೆ 67 ವರ್ಷ ಮತ್ತು ಸದಸ್ಯರಿಗೆ 65 ವರ್ಷ ನಿಗದಿಪಡಿಸಲಾಗಿತ್ತು.

ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದ ವಿಷಯಗಳ ದಾವೆಯಲ್ಲಿ 10 ವರ್ಷಗಳ 'ಗಣನೀಯ ಅನುಭವ' ಹೊಂದಿರುವ ವಕೀಲರು ಜಿಎಸ್ ಟಿ ಮೇಲ್ಮನವಿ ನ್ಯಾಯಾಧಿಕರಣದ ಸದಸ್ಯರಾಗಿ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

ಈ ತಿದ್ದುಪಡಿಯ ಪ್ರಕಾರ, ಜಿಎಸ್‌ಟಿಎಟಿಯ ಅಧ್ಯಕ್ಷರು ಮತ್ತು ಸದಸ್ಯರು ನಾಲ್ಕು ವರ್ಷ ಅಥವಾ ಕ್ರಮವಾಗಿ 70 ವರ್ಷ ಮತ್ತು 67 ವರ್ಷ ವಯಸ್ಸಿನವರೆಗೆ ಅಧಿಕಾರವನ್ನು ಹೊಂದಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com