ಮೋರ್ಬಿ ಸೇತುವೆ ಕುಸಿತ: ಒರೆವಾ ಗ್ರೂಪ್ ಸಿಎಂಡಿ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

135 ಮಂದಿಯ ಸಾವಿಗೆ ಕಾರವಾಗಿದ್ದ ಗುಜರಾತ್ ನ ಮೋರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರೆವಾ ಗ್ರೂಪ್ ಸಿಎಂಡಿ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಮೋರ್ಬಿ ಸೇತುವೆ ಕುಸಿತ
ಮೋರ್ಬಿ ಸೇತುವೆ ಕುಸಿತ

ಅಹ್ಮದಾಬಾದ್: 135 ಮಂದಿಯ ಸಾವಿಗೆ ಕಾರವಾಗಿದ್ದ ಗುಜರಾತ್ ನ ಮೋರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರೆವಾ ಗ್ರೂಪ್ ಸಿಎಂಡಿ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಕಳೆದ ವರ್ಷ ಅಂದರೆ ಅಕ್ಟೋಬರ್ 2022 ರಲ್ಲಿ 135 ಜೀವಗಳನ್ನು ಬಲಿ ಪಡೆದ ಮೊರ್ಬಿ ತೂಗು ಸೇತುವೆಯ ಕುಸಿತದ ಪ್ರಮುಖ ಆರೋಪಿ ಒರೆವಾ ಗ್ರೂಪ್ ಸಿಎಂಡಿ ಜಯಸುಖ್ ಪಟೇಲ್ ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. "ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಹೇಳಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲ್ಪಟ್ಟ ನಂತರ ಈ ವರ್ಷದ ಜನವರಿಯಲ್ಲಿ ಶರಣಾದಾಗಿನಿಂದ ಜಯಸುಖ್ ಪಟೇಲ್ ಜೈಲಿನಲ್ಲಿದ್ದಾರೆ.

ಜಯಸುಖ್ ಪಟೇಲ್ ಅವರು ಈ ಹಿಂದೆ ಸಲ್ಲಿಸಿದ್ದ ಸಾಮಾನ್ಯ ಜಾಮೀನು ಅರ್ಜಿಗಳನ್ನು ಕೆಳ ನ್ಯಾಯಾಲಯಗಳು ತಿರಸ್ಕರಿಸಿದ್ದವು. ಹೀಗಾಗಿ ಜಯಸುಖ್ ಪಟೇಲ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ವರ್ಷ ಅಕ್ಟೋಬರ್ 30 ರಂದು ಗುಜರಾತ್‌ನ ಮೊರ್ಬಿ ಪಟ್ಟಣದ ಮಚ್ಚು ನದಿಯ ಮೇಲೆ ಬ್ರಿಟಿಷರ ಕಾಲದ ತೂಗು ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಪಟೇಲ್ ಅವರ ಒರೆವಾ ಸಂಸ್ಥೆಯು ವಹಿಸಿಕೊಂಡಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ಕುಸಿದು, ಮಕ್ಕಳು ಸೇರಿದಂತೆ 135 ಜನರು ಸಾವನ್ನಪ್ಪಿದರು ಮತ್ತು 56 ಮಂದಿ ಗಾಯಗೊಂಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com